ಬೆಳಗಾವಿ-09: ಸಂಯಮ, ತಾಳ್ಮೆ ಹಾಗೂ ನಿರ್ದಿಷ್ಟ ಗುರಿಯೊಂದಿಗೆ ಸಾಧನೆಯ ಮಾರ್ಗ ಗಟ್ಟಿಯಾಗಿರಲಿ ಎಂದು ಏರ ಟ್ರಾಫಿಕ್ ಕಂಟ್ರೋಲ್ ಮಾಜಿ ಮುಖ್ಯಸ್ಥರು ಹಾಗೂ ಕೆನರಾ ಬ್ಯಾಂಕ್ ಉತ್ತರ ಕರ್ನಾಟಕದ ಸೆಕ್ಯುರಿಟಿ ಮುಖ್ಯಸ್ಥರಾದ ರೂಪಶ್ರೀ ಸಬರದ ಹೇಳಿದರು.
ದಿನಾಂಕ : 08/01/2023ರಂದು ,ಮಿಲೇನಿಮ್ ಗಾರ್ಡನ್ ದಲ್ಲಿ ನಗರದ ಜೆಜಿಐ ಸಂಸ್ಥೆಯ ಜೈನ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಉದ್ದೇಶ ಸ್ಪಷ್ಟವಾಗಿರಲಿ. ಕಠಿಣ ಪರಿಶ್ರಮಕ್ಕೆ ಸಮರ್ಪಿಸಿಕೊಳ್ಳುವ ಮನಸ್ಥಿತಿ ರೂಢಿಸಿಕೊಳ್ಳಿ. ವೈಯಕ್ತಿಕ ಗೌರವ ಸಾಧಿಸಿಕೊಂಡು ಸ್ವತಂತ್ರವಾಗಿ ಯೋಚಿಸುವ ಮತ್ತು ಕಾರ್ಯನಿರ್ವಹಿಸುವ ಸಾಮರ್ಥ್ಯ ಬೆಳಸಿಕೊಳ್ಳಿ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಂತರ ಅವರು ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ದೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಜೆಜಿಐ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರದ್ಧಾ ಕಟಾವಟೆ, ಜೈನ ಪಿಯು ಕಾಲೇಜಿನ ಪ್ರಾಚಾರ್ಯರಾದ ರೋಹಿಣಿ ಕೆ.ಬಿ. ಉಪ ಪ್ರಾಚಾರ್ಯರಾದ ವಿಶಾಲ ಪಾಟೀಲ, ಸಿಬ್ಬಂದಿ ವರ್ಗ, ವಿದ್ಯಾರ್ಥಿ ಸಮುದಾಯ ಉಪಸ್ಥಿತರಿದ್ದರು.
ನಂತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಉಪನ್ಯಾಸಕರಾದ ವಿನಿತಾ ಕಸ್ತೂರಿ, ಅಕ್ಷತಾ ಬಸವಾ, ನರೇಶ್ ರಾಮಾನೆ ಕಾರ್ಯಕ್ರಮ ಸಂಯೋಜಿಸಿದ್ದರು. ಅರುಂಧತಿ ಎಸ್ ಹಾಗೂ ಸೃಷ್ಟಿ ಚಿಕ್ಕಲಕ್ಕಿ ಕಾರ್ಯಕ್ರಮ ನಿರ್ಹಿಸಿದರು.