ಬೆಳಗಾವಿ-೦೪:ಜಿಲ್ಲೆಯ ರಾಯಬಾಗ ತಾಲ್ಲೂಕಿನ ಬ್ಯಾಕೂಡ ಗ್ರಾಮದ ಬಿರನಾಳ ಬ್ಯಾಕೂಡ ಮಧ್ಯದಲ್ಲಿರುವ ರಜನೀಕಾಂತ ಯಾದವಾಡೆ ಎಂಬುವವರಿಗೆ ಸೇರಿದ ತೋಟದಲ್ಲಿ ರವಿವಾರ ಬೆಳಗಿನ ಜಾವ ಶ್ರೀಗಂಧದ 2 ಗಿಡಗಳನ್ನು ಕಡಿದು ಕಳವು ಮಾಡಲಾಗಿದೆ.
ಮರುದಿನ ಸೋಮವಾರ ಬೆಳಗಿನ ಜಾವ
ಶ್ರೀಗಂಧದ 1 ಗಿಡವನ್ನು ಕಡಿಯುತ್ತಿದ್ದಾಗ ನಾಯಿಗಳಿಗೆ ಹೆದರಿ 1ಮರ ಕಡಿದು ಬಿಟ್ಟು ಕಳ್ಳರು ಪಲಾಯನ ಮಾಡಿದ್ದಾರೆ.
ರವಿವಾರ ಕಡಿದ ಶ್ರೀಗಂಧದ ಎರಡು ಮರಗಳ ತಿರುಳು (ಹಾಟ್‌ಉಡ್) ಬಲಿತ ಎರಡು ಗಿಡಗಳ ಕಾಂಡಗಳನ್ನು ಮಾತ್ರ ಹೊತ್ತೊಯ್ದಿದ್ದಾರೆ.
ಅರಣ್ಯ ಇಲಾಖೆಯವರಿಗೆ ದೂರು ನೀಡಲಾಗಿದ್ದು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಉಮೇಶ ಪ್ರಧಾನಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಶಾನೂರ ನಧಾಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳುವು ಆಗಿರುವ ಶ್ರೀಗಂಧ ಕಾಂಡಗಳ ಮೌಲ್ಯವನ್ನು ಸಾಬೂನು ಮತ್ತು ಮಾರ್ಜಕ ತಯಾರಿಕಾ ಕಾರ್ಖಾನೆ ನಿರ್ಧರಿಸಲಿದೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ರಜನೀಕಾಂತ ಯಾದವಾಡೆ, ‘ 50 ಶ್ರೀಗಂಧದ ಸಸಿ ನಾಟಿ ಮಾಡಲಾಗಿತ್ತು. ಬಹಳಷ್ಟು ಗಿಡಗಳು ಬೆಳವಣಿಗೆಯನ್ನೇ ಹೊಂದಿಲ್ಲ. ಅಲ್ಪಸ್ವಲ್ಪ ಬಲಿತ ಗಿಡಗಳು ಈ ಹಿಂದೆ ಎರಡು ಬಾರಿ ಕಳ್ಳತನವಾಗಿವೆ, ಸಹಜವಾಗಿಯೂ ಒಂದಷ್ಟು ಗಿಡಗಳು ಹಾಳಾಗಿ ಸದ್ಯ 20 ಗಿಡಗಳು ಇವೆ. ಅವುಗಳಲ್ಲಿ ಅರ್ಧದಷ್ಟು ಮಾತ್ರ ಗಂಧದ ತಿರುಳು ಹೊಂದಿವೆ. ಮಾರಾಟ ಮಾಡಲು ಅರಣ್ಯ ಇಲಾಖೆ ಅನುಮತಿಯ ನಿರೀಕ್ಷೆಯಲ್ಲಿದ್ದೆವು. ಹೆಚ್ಚಿನ ತಿರುಳು ಇಲ್ಲದಿದ್ದರೂ ಕಳ್ಳರ ಹಾವಳಿ ಕಾರಣಕ್ಕೆ ಅಲ್ಪಸ್ವಲ್ಪ ಬಲಿತ ಗಿಡಗಳನ್ನೆಲ್ಲ ಕಟಾವು ಮಾಡಬೇಕಾಗಿದೆ’
ಶ್ರೀಗಂಧದ ಗಿಡಗಳನ್ನು ಕಳ್ಳರಿಂದ ರಕ್ಷಿಸುವುದೇ ಅಸಾಧ್ಯವಾಗಿದೆ. ಇದಕ್ಕೆ ಪರಿಹಾರ ಏನೆಂಬುದೇ ಗೊತ್ತಾಗುತ್ತಿಲ್ಲ. ಈ ಬಗ್ಗೆ ಸರ್ಕಾರ ರೈತರ ನೆರವಿಗೆ ಬರಬೇಕಿದೆ ಎಂದರು.
ರಜನೀಕಾಂತ ಯಾದವಾಡೆ ತಾಲ್ಲೂಕಿನಲ್ಲಿ ಶ್ರೀಗಂಧ,ಬೆವು,ತೆಗ , ತೆಂಗು, ಮಾವು ಸುಮಾರು ವಿವಿಧ ವರ್ಗಕ್ಕೆ ಸೇರಿದ ಸಾವಿರಾರು ಗಿಡಗಳನ್ನು ನಾಟಿ ಮಾಡಿದವರಲ್ಲಿ ಮೊದಲಿಗರು. 20ವರ್ಷ ಕಳೆದರೂ ಅವರ ತೋಟದಲ್ಲಿನ ಗಿಡಗಳು ಯಾವುದೇ ಮರಗಳನ್ನು ಕಟಾವು ಮಾಡಿಲ್ಲ ಈ ತರಹದ ಕಳ್ಳತನ ಮಾಡಿದರೆ ಹೇಗೆ ಮರಗಳನ್ನು ಸಲಹುವುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ