ಬೆಳಗಾವಿ-೦೪: ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ ನಂಬರ್ ಜೋಡಣೆ ಮಾಡುವುದನ್ನು ತಕ್ಷಣ ಕೈ ಬಿಡಬೇಕು ಹಾಗೂ ಇತರೆ ಬೇಡಿಕೆ ಇಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬುಧವಾರ ಬೆಳಗಾವಿಯ ನೆಹರು ನಗರದ ಹೆಸ್ಕಾಂ ಕಚೇರಿ ಮುಂದೆ ನೂರಾರು ಅಡುಗೆ ಮಾಡಿ ರೈತ ಧರಣಿ ನಡೆಸಿ ಪ್ರತಭಟಿಸಿದರು. ಕೃಷಿ ಪಂಪ್‌ಸೆಟ್‌ಗಳಿಗೆ ಜಾರಿಗೊಳಿಸಿರುವ ಕಾನೂನು ರದ್ದು ಮಾಡಿ ಹಿಂದಿನಂತೆ ರೈತರಿಗೆ ವಿದ್ಯುತ್ ಪರಿವರ್ತಕ ಕಂಬ ವಾಯರ್ ಇತರೆ ಉಪಕರಣಗಳನ್ನು ಉಚಿತವಾಗಿ ಇಲಾಖೆ ಸರಬರಾಜು ಮಾಡಿ ಸಮರ್ಪಕ ವಿದ್ಯುತ್ ನೀಡಬೇಕು. ಮನೆ ಬಳಕೆಗೆ 200 ಯೂನಿಟ್ ಉಚಿತ ವಿದ್ಯುತ್ ಜಾರಿ ಮಾಡಿರುವ ಸರ್ಕಾರವು ಹೆಚ್ಚಿಸಿರುವ ಯೂನಿಟ್ ಧರವನ್ನು ಕಡಿಮೆ ಮಾಡಬೇಕು. ವಿದ್ಯುತ್ ಅಪಘಾತಗಳಿಗೆ ಸಿಲುಕಿ ಮರಣ ಹೊಂದಿದ ವ್ಯಕ್ತಿಯ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಸೋಲಾರ್ ಸಂಪರ್ಕ ಹೊಂದವು ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಆದೇಶವನ್ನು ಕೈ ಬಿಡಬೇಕು. ನಗರ ಮತ್ತು ಹಳ್ಳಿಗಳಲ್ಲಿ ತಾರತಮ್ಯ ಇಲ್ಲದೆ ವಿದ್ಯುತ್ ಸಮಾನ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭಿಮಸಿ, ರಾಜು ಮೊರ್ವೆ ಇತರರು ಉಪಸ್ಥಿತರಿದ್ದರು.