23/12/2024
IMG-20240902-WA0003

ಸವದತ್ತಿ-೦೨:ಸೋಮವಾರ ನಡೆದ ಸವದತ್ತಿ ತಾಲೂಕಾ ವೈದ್ಯಾಧಿಕಾರಿಗಳು ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಶ್ರೀಪಾದ ಸಬನೀಸ್ ಅವರಿಗೆ ಕೆಲಸದ ನಿಮಿತ್ಯವಾಗಿ ದೂರವಾಣಿಯಲ್ಲಿ ಮಾತನಾಡುತ್ತಿರುವಾಗ ಇಂಚಲ ಗ್ರಾಮ ಪಂಚಾಯತ್ ಪಿ ಡಿ ಓ ಮಲ್ಲಪ್ಪ ಹಾರುಗೊಪ್ಪ ಇವರು ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಕ್ಕಾಗಿ ಇಂಚಲ ಪಿ ಡಿ ಓ ವಿರುದ್ದ ಕ್ರಮಕ್ಕೆ ಅಗ್ರಹಿಸಿ ತಾಲೂಕಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ತಾಲೂಕು ಅರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತರು ಪಿ ಡಿ ಓ ಮೇಲೆ ಕ್ರಮಕ್ಕೆ ಅಗ್ರಹಿಸಿ ಪ್ರತಿಭಟನೆ ಮಾಡಿ ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲೂಕಾ ನೌಕರರ ಸಂಘದ ಅಧ್ಯಕ್ಷ ಉದಯಕುಮಾರ ಹಿರಿಯ ಅಧಿಕಾರಿಗಳಿಗೆ ಅವಾಜ್ ಹಾಕಿದ ಪಿ ಡಿ ಓ ಅಮಾನತ್ತಾಗಬೇಕು ಎಂದರು.
ಈ ಪ್ರತಿಭಟನೆಯಲ್ಲಿ ಡಾ. ಎಮ್ ಎಚ್. ಮಲ್ಲನಗೌಡ, ಡಾ. ವಿಜಯ ನರಗುಂದ, ಡಾ. ಆರ್ ಆರ್. ಹಿರೇಕುಂಬಿ, ಡಾ. ಬಿ ಕೆ ಮುಲ್ಲಾ, ಡಾ. ಜ್ಯೋತಿ ಬಸಲಿ, ಡಾ. ಕೃಷ್ಣ ಹಣಸಿ, ಡಾ. ಎಸ್ ಎಸ್ ಹಿರೇಮಠ್, ಅಬ್ದುಲ್ ಬಸ್ತಿ, ಡಾ. ಶಿವನಗೌಡ, ಸೇರಿದಂತೆ ಸವದತ್ತಿ ತಾಲೂಕಾ ಕಾರ್ಯನಿರತ ಪ್ರಾಥಮಿಕ ಅರೋಗ್ಯ ಸಿಬ್ಬಂದಿ, ತಾಲೂಕಾ ಅರೋಗ್ಯ ಕುಟುಂಬ ಕಲ್ಯಾಣ ಕಾರ್ಯಾಲಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಜರಿದ್ದರು.

error: Content is protected !!