ಬೆಳಗಾವಿ-೦೨:ಸೋಮವಾರ ಇಂದು ಪತ್ರಿಕಾ ಗೋಷ್ಠಿ ನಡೆದ ಸೆಲ್ಕೋ ಫೌಂಡೇಶನ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ನಾಳೆ ಮಂಗಳವಾರ ಸೆ. ೩ ರಂದು ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 5 ರವರೆಗೆ ಸ್ವ ಸಹಾಯ ಗುಂಪಿನ ಮಹಿಳೆಯರಿಗೆ ಸೌರ ಸ್ವ-ಉದ್ಯೋಗ ಮೇಳ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬೆಳಗಾವಿ ವಿಭಾಗದ ಮ್ಯಾನೇಜರ್ ವಿನಾಯಕ ಹೆಗಡೆ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಲ್ಕೋ ಫೌಂಡೇಶನ ಸಂಸ್ಥಾಪಕ ಡಾ. ಹರೀಶ ಹಂದೆ ಅವರು 1995 ರಲ್ಲಿ ಸೋಲ್ಕೊ ಇಂಡಿಯಾ ಆರಂಭಿಸಿ, 2010ರಲ್ಲಿ ಸೆಲ್ಕೋ ಫೌಂಡೇಶನ ಹುಟ್ಟುಹಾಕಿದರು.
ಕಳೆದ 14 ವರ್ಷಗಳಿಂದ ದೇಶ್ಯಾದ್ಯಂತ ಸುಸ್ಥಿರ ಅಭಿವೃದ್ಧಿ ಹಾಗೂ ಸೌರ ವಿದ್ಯುತ್ ವಿಭಾಗದಲ್ಲಿ ಸೆಲ್ಕೋ ಫೌಂಡೇಶ ಹೊಸ ಆವಿಷ್ಕಾರಗಳನ್ನು ತಂದಿದೆ. ನೀರುದ್ಯೋಗ ಮಹಿಳೆಯರು ಬದುಕು ರೂಪಿಸಿಕೊಳ್ಳಲು ಸೆಲ್ಕೋ ಫೌಂಡೇಶನ ಸಹಾಯ- ಸಹಕಾರ ನೀಡುತ್ತಾ ಬಂದಿದೆ. ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ೫೦ಕ್ಕೂ ಹೆಚ್ಚು ಮಹಿಳೆಯರಿಗೆ ಸ್ವ ಉದ್ಯೋಗವನ್ನು ಹಾಗೂ ಸೌರ ವಿದ್ಯುತ್ ಮುಖಾಂತರ ಜೀವನೋಪಾಯ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಗಮನಾರ್ಹ ಕೆಲಸಗಳನ್ನು ಮಾಡುತ್ತಿದೆ. ಜಿಲ್ಲೆಯಾದ್ಯಂತ ೨೦೦ ಕ್ಕೂ ಹೆಚ್ಚು ವಿಶೇಷಚೇತನರಿಗೆ ಸ್ವಾವಲಂಬನೆಯ ಜೀವನವನ್ನು ಕಟ್ಟಿಕೊಳ್ಳಲು ಸಹಾಯ ಮಾಡಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಮಹಿಳೆಯರು ಉದ್ಯೋಗ ಅರಸಿ ಬೆರೆಡೆ ಹೋದರು ಬದುಕು ಕಟ್ಟಿಕೊಳ್ಳವುದು ವಿರಳ. ತಮ್ಮ ಊರಲ್ಲಿ ಮಹಿಳೆಯರು ಬೆಳೆದು ಕುಟುಂಬಕ್ಕೆ ಬೆಳಕಾಗಬೇಕು ಎಂಬ ಉದ್ದೇಶದಿಂದ ಮಹಿಳೆಯರಿಗಾಗಿ ಸೌರ ಸ್ವ-ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಸ್ವ-ಉದ್ಯೋಗ ಮಹಿಳೆಯರಿಗೆ ಜೀವನಕ್ಕೆ ಆಸರೆಯಾಗಲಿದೆ. ಆರೋಗ್ಯ, ಜೀವನ ಉಪಾಯ ಮತ್ತು ಮಕ್ಕಳಿಗೆ ಶಿಕ್ಷಣ ಒದಗಿಸಲು ಬಹಳಷ್ಟು ಸಹಕಾರಿಯಾಗಿದೆ. ಅದಕ್ಕಾಗಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಸೌರ ಸ್ವ-ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬೇಕು ಮನವಿ ಮಾಡಿಕೊಂಡರು.
ಈ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ರಾಹುಲ್ ಶಿಂದೆ ಅವರು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ವಿವಿಧ ಗಣ್ಯರು ಆಗಮಿಸಲಿದ್ದಾರೆ. ಸ್ವ ಸಹಾಯ ಗುಂಪಿನ ಮಹಿಳೆಯರಿಗಾಗಿ, ಮಹಿಳಾ ಸ್ನೇಹಿ ತಂತ್ರಜ್ಞಾನಗಳ ಕುರಿತು ತಿಳುವಳಿಕೆ ಹಾಗೂ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ ಎಂದು ಹೇಳಿದರು.
ಚಂದ್ರಶೇಖರ ಮಡಿವಾಳರ , ಪ್ರಕಾಶ ಮೇಟಿ, ವಿರೇಶ ತಡಹಾಳ, ಸಂತೋಷ ಪತ್ತಾರ, ಮಾಲತೇಶ , ಮಹೇಶ , ಮದು ರೆಡ್ಡಿ ಹಾಗೂ ಸೋಲ್ಕೊ ಫೌಂಡೇಶನ್ ಬೆಂಗಳೂರು ಮುಂತಾದವರು ಇದ್ದರು