23/12/2024
IMG-20240830-WA0057

ಬೆಳಗಾವಿ-೩೦: ಸರಕಾರಿ ಸರದಾರ್ಸ ಪದವಿ ಪೂರ್ವ ಕಾಲೇಜಿನಲ್ಲಿ ‘ಜಲ ಶಕ್ತಿ ಅಭಿಯಾನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ನೀರಿನ ಸಂರಕ್ಷಣೆ,ಮಳೆನೀರು ಕೊಯ್ಲು, ಮಳೆ ನೀರು ಸಂಗ್ರಹಣೆಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ  ವೈ ಎಂ ಪಾಟೀಲ್ ಅವರು ಜಲ ಶಕ್ತಿ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದ್ದು ಮಳೆ ನೀರನ್ನು ಸಂಗ್ರಹಣೆ ಮಾಡಿ ಪುನರ್ಬಳಕೆ ಮಾಡುವುದು ಇಂಗುಗುಂಡಿಗಳನ್ನು ತೋಡುವುದರ ಮೂಲಕ ಅಂತರ್ಜಲ ಹೆಚ್ಚಿಸುವುದು ಮೊದಲಾದ ಕಾರ್ಯಕ್ರಮಗಳನ್ನು ಎನ್.ಎಸ್.ಎಸ್ ಶಿಬಿರಗಳಲ್ಲಿ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುವುದು ಎಂದರು. ಕಾರ್ಯಕ್ರಮ ಅಧಿಕಾರಿಗಳಾದ ಶ್ರೀ. ಎಂ. ಎಂ.ಮುಲ್ಲಾ ಸರ್ ಅವರು ನೀರಿನ ಮಹತ್ವ ಕೆರೆ ಬಾವಿಗಳ ನಿರ್ಮಾಣದ ಬಗ್ಗೆ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಾದ ಸಾಗರ, ಪ್ರವೀಣ,ಮಳೆ ನೀರು ಕೊಯ್ಲು ಮಳೆ ನೀರು ಸಂಗ್ರಹನೆ ಕುರಿತಾಗಿ ಮಾಹಿತಿ ನೀಡಿದರು. ಎಲ್ಲ ವಿದ್ಯಾರ್ಥಿಗಳು ಮಳೆ ನೀರಿನ ಸಂರಕ್ಷಣೆಯ ಕುರಿತ ಚರ್ಚೆಯಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಉಪನ್ಯಾಸಕರುಗಳಾದ ಶ್ರೀಮತಿ ಸವಿತಾ ಮೇಡಂ, ನಿಜಮುದ್ದೀನ್ ಸರ್, ಆರ್‌.ಪಿ. ಕಾಂಬಳೆ ಸರ್, ದಯಾನಂದ ಸರ್ ಹಾಗೂ ಅತಿಥಿ ಉಪನ್ಯಾಸಕರು ಹಾಜರಿದ್ದರು.

error: Content is protected !!