ಬೆಳಗಾವಿ-೩೦: ಬಿಜೆಪಿ ಆರೋಪದಲ್ಲಿ ಯಾವುದೇ ಹುರುಳಿಲ್ಲ , ಮುಡಾ ಕೇಸ್ ವಿಚಾರಣೆ ನ್ಯಾಯಾಲಯದಲ್ಲಿದೇ ನಿಶ್ಚಿತವಾಗಿ ಗೆಲುವು ನಮ್ಮದೇ. ಮುಂದಿನ ಐದು ವರ್ಷ ಸಿದ್ಧರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದೆವರೆಯಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಸಿಎಂ ಅವರ ಅಳಿಯಂದಿರು ಪ್ರೀತಿಯಿಂದ ಭೂಮಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಬಿಜೆಪಿಯವರಿಗೆ ಐದು ವರ್ಷ ಯಾವುದೇ ಕೆಲಸವಿಲ್ಲದೇ ಮುಡಾ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ನ್ಯಾಯಾಲಯದಲ್ಲಿ ಸಿದ್ದರಾಮಯ್ಯ ಅವರಿಗೆ ನ್ಯಾಯ ಸಿಗಲಿದೆ. ಜಯ ನಮ್ಮ ಪರವಾಗಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಯಾಗುವ ಆಸೆಯಿದೆ, ದುರಾಸೆಯಿಲ್ಲ: ಹೈಕಮಾಂಡ್, ನಮ್ಮ ಶಾಸಕರು, ಸಚಿವರು, ಪಕ್ಷದ ಕಾರ್ಯಕರ್ತರು, ಸಿಎಂ ಸಿದ್ದರಾಮಯ್ಯ ಪರ ಇದ್ದಾರೆ. ಇಡೀ ಕಾಂಗ್ರೆಸ್ ಸಿದ್ದರಾಮಯ್ಯ ಪರ ಇದೆ. ಯಾರು ಸಿಎಂ ಸ್ಥಾನಕ್ಕೆ ಟವಲ್ ಹಾಕಿಲ್ಲ. ಅವರೇ ಮುಂದಿನ ಸಿಎಂ ಎನ್ನುತ್ತ ,ನನಗೂ ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ ದುರಾಸೆಯಿಲ್ಲ ಎಂದು ಹೇಳಿದ್ದಾರೆ .
ರಾಜ್ಯಪಾಲರು ಬಿಜೆಪಿ ಕೈಗೊಂಬೆಯಾಗಿದ್ದಾರೆ. ಅದಕ್ಕಾಗಿ ನಾವೂ ರಾಜಭವನ ಚಲೋ ಹಮ್ಮಿಕೊಂಡಿದ್ದೆವೆ ಕುಮಾರಸ್ವಾಮಿ, ನಿರಾಣಿ, ಜೊಲ್ಲೆ, ಕುಮಾರಸ್ವಾಮಿ ಮೇಲೂ ರಾಜಕೀಯವಾಗಿ ಎಲ್ಲವೂ ಕೇಸ್ ಹಾಕಬೇಕು ಎಂದು ಕಿಡಿ ಕಾರಿದರು.
ಕೆಐಎಡಿಬಿ ಸಿಎ ಸೈಟ್ ವಿಚಾರವಾಗಿ ಬಿಜೆಪಿ ಅಪಪ್ರಚಾರ ನಡೆಯುತ್ತಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಐವತ್ತು ವರ್ಷಗಳ ಸುದೀರ್ಘ ರಾಜಕೀಯ ಜೀವನದ ಅನುಭವ ಹೊಂದಿದ್ದಾರೆ. ಅವರ ಕುಟುಂಬ ಟ್ರಸ್ಟ್ ಗಾಗಿ ಐದು ಎಕರೆ ಸಿಎಂ ನಿವೇಶನ ಬೇಕೆಂದು ಅರ್ಜಿ ಹಾಕಿದ್ದರು. ಅದನ್ನು ಆದ್ಯತೆ ಆಧಾರದಲ್ಲಿ ನಿರ್ಧಾರ ಮಾಡಿದ್ದೆವು ಎಂದು ತಿಳಿಸಿದರು. ಧಾರವಾಡ-ಬೆಳಗಾವಿ ನಡುವೆ ಈಗಿನ ರೈಲು ಪಯಣ ಬಹಳಷ್ಟು ಸಮಸ್ಯೆಯಾಗುತ್ತಿದೆ. ಇದನ್ನು ಪ್ರಯಾಸಕರವನ್ನು ಸುಗಮಗೊಳಿಸಲು 888 ಎಕರೆ ಭೂಮಿ ಬೇಕಾಗಿದೆ. ನಿಗದಿತ ಸ್ಥಳ ಸಿಗದೇ ಕಾಮಗಾರಿ ನಡೆಸಲು ಅಸಾಧ್ಯ. ಭೂಮಿ ಹಸ್ತಾಂತರವಾದರೆ 2027ರ ಕೊನೆಯ ವೇಳೆಗೆ ಕಾಮಗಾರಿ ಮುಗಿಸಬಹುದು ಎಂದು ಪಾಟೀಲ ಹೇಳಿದರು.
ಬೆಳಗಾವಿ ನಾವಗೆ ಫ್ಯಾಕ್ಟರಿ ಬೆಂಕಿ ಅವಘಡ ನೋವು ತಂದಿದೆ. ಈ ಪ್ರಕರಣ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವಾಘಲಿದೆ. ಮೃತ ಯುವಕನ ಕುಟುಂಬಕ್ಕೆ ಪರಿಹಾರ ನೀಡುವ ಜವಾಬ್ದಾರಿ ನನ್ನದಾಗಿದೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ವಿನಯ ನಾವಲಗಟ್ಟಿ ಸೇರಿದಂತೆ ಇತರರು ಹಾಜರಿದ್ದರು.