ಚಾಮರಾಜನಗರ-೨೧:ಚಾಮರಾಜನಗರ ತಾಲ್ಲೂಕಿನ ದಡದಹಳ್ಳಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಮೈಸೂರಿನ ಓಡಿಪಿ ಸಂಸ್ಥೆ ಹಾಗೂ ಸಂತ ಜೋಸೆಫರ ಆಸ್ಪತ್ರೆಯ ವತಿಯಿಂದ ಕ್ಯಾನ್ಸರ್ ಹಾಗೂ ವಿವಿಧ ರೀತಿಯ ರೋಗಗಳನ್ನು ತಪಾಸಣೆ ನಡೆಸಲಾಯಿತು.
ಆರೋಗ್ಯ ತಪಾಸಣಾ ಶಿಬಿರವನ್ನು ಹೆಬ್ಬಸೂರಿನ ಗ್ರಾಮ ಪಂಚಾಯಿತ್ ಅಧ್ಯಕ್ಷೆ ಪದ್ಮ.ಕೆ ಉದ್ಘಾಟಿಸಿದರು.
ಓಡಿಪಿ ಸಂಸ್ಥೆಯ ಸಂಯೋಜಕಿ ಯಮುನಾ ಅವರು ಮಾತನಾಡಿ ಕ್ಯಾನ್ಸರ್ ಎಂಬ ಮಾರಕ ರೋಗ ದೈನಂದಿನಯಾAತ್ರಿಕ ಬದುಕಿನ ನಡುವೆ ಕಲಬೆರಕೆ ಆಹಾರ ಸೇವನೆ ವಿಷಕಾರಿಕ ಆಹಾರ ಸೇವ£ಯಿಂದ ಹೆಚ್ಚಾಗಿ ಕಂಡುಬರುತ್ತದೆ. ಈ ನಿಟ್ಟಿನಲ್ಲಿ ೨೦೧೯ ನವೆಂಬರ್ ನಿಂದ ಮೈಸೂರಿನ ಓಡಿಪಿ ಸಂಸ್ಥೆಯಲ್ಲಿ ನಿರಂತರವಾಗಿ ಸ್ಪರ್ಶ ಎಂಬ ಕ್ಯಾನ್ಸರ್ ತಡೆ ಅಭಿಯಾನವನ್ನು ಪ್ರಾರಂಭಿಸಿದೆ, ಪ್ರಸ್ತುತ ಕಾರಿತಾಸ್ ಇಂಡಿಯಾ ನವದೆಹಲಿ, ಸಂಘ ಮಿತ್ರ ಗ್ರಾಮೀಣ ಹಣಕಾಸು ಸೇವಾ ಸಂಸ್ಥೆ. ಮೈಸೂರು ಇದರ ಪ್ರಯೋಜಕತ್ವದ ಅಭಿಯಾನ ದಡಿ ಕ್ಯಾನ್ಸರ್ ತಡೆಗಾಗಿ ಜಾಗೃತಿ, ಅರಿವು, ಕೈ ತೋಟ ನಿರ್ಮಾಣ, ಆರೋಗ್ಯ ತಪಾಸಣೆ, ಉಚಿತ ಕ್ಯಾನ್ಸರ್ ತಪಾಸಣೆ ಚಿಕಿತ್ಸೆಗಾಗಿ ಕ್ಯಾನ್ಸರ್ ರೋಗದ ಪ್ರಾರಂಭದ ಹಂತದಲ್ಲಿ ಪತ್ತೆ ಹಚ್ಚಿ ಅದೇಷ್ಟೋ ರೋಗಿಗಳನ್ನು ಜೀವಂತವಾಗಿರುವಂತೆ ಸಮಾಲೋಚನೆ ಜಾಲಬಂಧ ಮೇಲ್ವಿಚಾರಣೆ, ಅನುಸರಣೆ ಮಾಡುತ್ತಿದೆ ಎಂದರು.
ಪ್ರತಿಯೊಬ್ಬರು ಆರೋಗ್ಯವಂತರಾಗಿರಬೇಕು ಎಂಬುದು ನಮ್ಮ ಸಂಸ್ಥೆಯ ಗುರಿಯಾಗಿದೆ. ಇಂತಹ ಶಿಬಿರಗಳ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಆರೋಗ್ಯ ತಪಾಸಣಾ ಶಿಬಿರದಲ್ಲಿ ಮೈಸೂರಿನ ದಂತ ವೈದ್ಯ ಡಾ.ನಿತೀನ್, ಡಾ. ಜೆನೀಫರ್, ಮತ್ತು ಶುಶ್ರೂಷಕಿಯರು, ಗ್ರಾಪಂ ಸದಸ್ಯ ಮೂರ್ತಿ, ಗೋವಿಂದರಾಜು, ಪ್ರತಿಮಾ ಗ್ರಾಪಂ ಕಾರ್ಯದರ್ಶಿ ಪ್ರಕಾಶ್ ವಲಯ ಸಂಯೋಜಕರಾದ ಸಿದ್ದರಾಜು, ಎಲ್.ಡಿ ಯೋಜನೆ ಕ್ಷೇತ್ರ ಸಂಯೋಜಕಿ ಪರಮೇಶ್ವರಿ, ಕಾರ್ಯಕರ್ತರಾದ ಸಾಕಮ್ಮ, ಸುಮಿತ್ರ, ಹಾಗೂ ಚಾಮರಾಜನಗರದ ಮಹಿಳೋದಯ ಮಹಿಳಾ ಒಕ್ಕೂಟದ ಪ್ರತಿನಿಧಿಗಳು ಹಾಜರಿದ್ದರು.
ಈ ಸಂದಭದಲ್ಲಿ ೧೩೦ ಜನರಿಗೆ ಆರೋಗ್ಯ ತಪಾಸಣೆ ನಡೆಸಿ ಇಬ್ಬರೂ ಕ್ಯಾನ್ಸರ್ ರೋಗಿಯನ್ನು ಹಾಗೂ ೧೨ ಜನ ಮಧುಮೇಹ ರೋಗಿಯನ್ನು ಗುರುತಿಸಲಾಯಿತು,