23/12/2024
IMG-20240821-WA0068

ಚಾಮರಾಜನಗರ-೨೧- ಕೇರಳರಾಜ್ಯದ ವೈನಾಡಿನಲ್ಲಿ ನಡೆದ ಭೀಕರ ದುರಂತದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪರಿಸರವಾದಿ ಪುಣಜನೂರು ದೊರೆಸ್ವಾಮಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ನಗರದ ಡಿಸಿ ಕಛೇರಿಗೆ ಜಿಲ್ಲೆಯ ಪರಿಸರ ಕಾರ್ಯಕರ್ತರ ಸಂಘಟನೆಯ ಮುಖಂಡರು ಬುದವಾರ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಅವರಿಗೆ ಮನಿವಿ ಸಲ್ಲಿಸಿದರು.
ಪರಿಸರವಾದಿ ಪುಣಜನೂರು ದೊರೆಸ್ವಾಮಿ ಅವರು ಮಾತನಾಡಿ ಚಾಮರಾಜನಗರ ಜಿಲ್ಲೆ ಅತಿಹೆಚ್ಚು ಬೆಟ್ಟಗುಡ್ಡಗಳು ಮತ್ತು ಕಾಡು ಪ್ರದೇಶದಿಂದ ಕೂಡಿದೆ ಯಾವ ಸಂದರ್ಭದಲ್ಲಿಯಾದರು ಅನಾಹುತ ನಡೆಯಬಹುದು ಅದನ್ನು ತಡೆಯಲು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಮುಂದೆಬರಬೇಕಿದೆ. ಅರಣ್ಯ ಪ್ರದೇಶಗಳು ಒತ್ತವರಿ, ಅಕ್ರಮಗಣಿಗಾರಿಕೆ, ಅಕ್ರಮ ರೆಸಾರ್ಟ್ಗಳು ಹೋಮ್ ಸ್ಟೇ, ಹೋಟೆಲ್‌ಗಳು ಅಕ್ರಮ ನಿರ್ಮಾಣ, ರಸ್ತೆ ಅಗಲೀಕರಣ , ಮರಗಳ ಕಡಿತ ಹಾಗೂ ಇನ್ನು ಅನೇಕ ಅಕ್ರಮ ಯೋಜನೆಗಳನ್ನು ನಡೆಸುತ್ತಿರುವುದು ಕಂಡು ಬಂದಿದೆ, ಇದರಿಂದ ಪರಿಸರÀ ಹನಿಯಾಗುವುದು ಕಂಡಿತ ಎಂದು ಹೇಳಿದರು.

ನಮ್ಮ ಬೇಡಿಕೆಗಳು
ಪಶ್ಚಿಮ ಘಟ ಪ್ರಾಧಿಕಾರವನ್ನು ರಚಿಸಬೇಕು, ಸೂಕ್ಷ ಪರಿಸರ ವಲಯಗಳನ್ನು ಘೋಷಿಸಬೇಕು, ಸೂಕ್ಷ ಪರಿಸರ ವಲಯಗಳಲ್ಲಿ ಗಣಿಗಾರಿಕೆ, ಕಲ್ಲು ಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆಗಳನ್ನು ನಿಷೇಧಿಸಬೇಕು, ಸೂಕ್ಷ ಪರಿಸರ ವಲಯಗಳಲ್ಲಿ ಕಟ್ಟಡ ನಿರ್ಮಾಣ, ಮೂಲಸೌಕರ್ಯ ನಿರ್ಮಾಣವನ್ನು ನಿರ್ಬಂಧಿಸಬೇಕು, ಪರಿಸರ ಪರಿಣಾಮ ಅಧ್ಯಯನವನ್ನು( ಇ,ಐ.ಎ) ಬಲಪಡಿಸಬೇಕು, ಸುಸ್ಥಿರಕೃಷಿ ಮತ್ತು ವನೀಕರಣವನ್ನು ಪ್ರೋತ್ಸಾಹಿಸಬೇಕು, ಪವಿತ್ರ ಬನಗಳನ್ನು ಮತ್ತು ಪಾರಂಪರಿಕ ಜ್ಞಾನವನ್ನು ರಕ್ಷಿಸಬೇಕು, ಪರಿಸರ ಸ್ನೇಹಿ ಪ್ರವಾಸೋದ್ಯಮವಕ್ಕೆ ಮಾರ್ಗಸೂಚಿ ತಯಾರಿಸಬೇಕು, ಪ್ರಕೃತಿ ಸಂರಕ್ಷಣೆಗಾಗಿ ನಿಧಿ ಕಾಯ್ದಿರಿಸಬೇಕು, ಹಾಗೂ ಉಸ್ತುವಾರು ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪರಿಸರ ಸಂಘಟನೆಯ ಸದಸ್ಯರಾದ ರಂಗಕರ್ಮಿ ಕೆ. ವೆಂಕಟರಾಜು, ಗಿರಿಜನ ಸಂಘದ ಅಧ್ಯಕ್ಷ ಮುತ್ತಯ್ಯ, ಡಾ. ವಿರಭದ್ರನಾಯ್ಕ್, ರಂಗಸ್ವಾಮಿ ನಾಯ್ಕ್, ಸಿ.ಎಂ.ವೆಂಕಟೇಶ್, ಅಬ್ರಾಹಮ್ ಡಿ.ಸಿಲ್ವ, ರೈತ ಸಂಘದ ಕಾಡಳ್ಳಿ ಚಿನ್ನಸ್ವಾಮಿ, ಗ್ರಾಪಂ ಸದಸ್ಯ ಚಂದ್ರು, ಹಾಗೂ ಇನ್ನು ಮುಂತಾದವರು ಉಪಸ್ಥಿತಿರಿದ್ದರು.

error: Content is protected !!