ಬೆಳಗಾವಿ-07: ಬೆಳಗಾವಿ ತಾಲೂಕಿನ ನಾವಗೆ ಗ್ರಾಮದ ವ್ಯಾಪ್ತಿಯ ಸ್ನೇಹಂ ಟಿಕೋ ಟೇಪ್ ತಯಾರಿಕಾ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು, ಕಾರ್ಖಾನೆಯೊಳಗೆ ಹಲವರು ಸಿಲುಕಿರುವ ಸಾಧ್ಯತೆ ಇದೆ. ಇಡೀ ಕಾರ್ಖಾನೆ ಬೆಂಕಿಗೆ ಆಹುತಿಯಾಗಿದೆ.
ಕಾರ್ಖಾನೆಯಲ್ಲಿ ಪ್ಲಾಸ್ಟಿಕ್ ತುಂಬಿದ್ದರಿಂದ ಬೆಂಕಿ ವ್ಯಾಪಿಸಿದೆ. ಬೆಂಕಿ ಹೊತ್ತಿಕೊಂಡಾಗ 60ಕ್ಕೂ ಹೆಚ್ಚು ಮಂದಿ ಒಳಗಿದ್ದರು ಎಂದು ವರದಿಯಾಗಿದೆ. ಕಾರ್ಖಾನೆಯ ಲಿಫ್ಟ್ ಬಳಿ 8 ರಿಂದ 10 ಕಾರ್ಮಿಕರು ಇದ್ದರು. ತಕ್ಷಣವೇ ಐದು ಜನರನ್ನು ಸ್ಥಳಾಂತರಿಸಲಾಯಿತು. ಇನ್ನೂ ಹಲವರು ಒಳಗೆ ಇದ್ದಾರೆ ಎಂದು ನಂಬಲಾಗಿದೆ. ಸ್ನೇಹಮ್ ಕಾರ್ಖಾನೆಯಲ್ಲಿ 74 ಕಾರ್ಮಿಕರು ತಲಾ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಬೆಂಕಿ ಹೊತ್ತಿಕೊಂಡಾಗ ಹಲವರು ಹೊರಬರಲು ಹರಸಾಹಸ ಪಡುತ್ತಿದ್ದರು. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು.