ಬೆಳಗಾವಿ-03: ನಗರದ ಶಿವಬಸವನಗರದ ಕಾರಂಜಿಮಠದ ಶಿವಾನುಭವ ಮಂಟಪದಲ್ಲಿ ಪವಿತ್ರ ಶ್ರಾವಣ ಮಾಸದ ನಿಮಿತ್ತ ಪ್ರತಿ ಸೋಮವಾರ ವಿದ್ವಾಂಸರಿಂದ ವಿಶೇಷ ಉಪನ್ಯಾಸ, ಸಂಗೀತ-ಸನ್ಮಾನ ಕಾರ್ಯಕ್ರಮಗಳನ್ನು ಜರುಗಲಿವೆ. ಇದೇ ಸೋಮವಾರ 05 ರಿಂದ
ಸಾಯಂಕಾಲ 6 ಗಂಟೆಗೆ 277ನೇ ಶಿವಾನುಭವ ಕಾರ‍್ಯಕ್ರಮ ಆಯೋಜಿಸಲಾಗಿದೆ.
ಈ ವೇಳೆ ಕಾರಂಜಿಮಠದ ಶ್ರೀ ಮ.ನಿ.ಪ್ರ ಗುರುಸಿದ್ಧ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಲಿದ್ದಾರೆ.
ಹಿರಿಯ ಸಾಹಿತಿಗಳಾದ ಎಲ್. ಎಸ್. ಶಾಸ್ತ್ರಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾಮಚಂದ್ರ ಏಡಕೆ ಉಪನ್ಯಾಸ ನೀಡವರು. ವೀರವಾಣಿ ಪತ್ರಿಕೆಯ ಸಂಪಾದಕರು ಉಪನ್ಯಾಸ ನೀಡಲಿದ್ದಾರೆ. ಈ ವೇಳೆ ಭಾರತೀಯ ಹಬ್ಬಗಳ ಮಹತ್ವದ ಬಗ್ಗೆ ಕಾರ್ಯಕ್ರಮ ಜರುಗಲಿದೆ. ಬಳಿಕ , ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷರಾದ ಅಶೋಕ ಚಂದರಗಿ ಅವರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ.
ಸೋಮವಾರ 12 ರಂದು ಸಾಯಂಕಾಲ 6 ಗಂಟೆಗೆ ಮಹಿಳಾ ಸಮಾವೇಶ ಮತ್ತು ಸಂಗೀತ ಕಾರ‍್ಯಕ್ರಮ ಜರುಗಲಿವೆ.
ಈ ವೇಳೆ ಅ.ಭಾ.ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಅಧ್ಯಕ್ಷತೆ ರತ್ನಪ್ರಭಾ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದಾರೆ.
ಹಿರಿಯ ಸಾಹಿತಿ ಸುನಂದಾ ಎಮ್ಮಿ ಅವರು (ಗುಡ್ಡಾಪುರದ ದಾನದಾಸೋಹಿ ದಾನಮ್ಮ) ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ.
ಸೋಮವಾರ 19 ರಂದು ಸಾಯಂಕಾಲ 6 ಗಂಟೆಗೆ ಮಹಿಳಾ ಸಮಾವೇಶ ನಡೆಯುವುದು.
ಕೆ.ಎಲ್.ಇ. ಸಂಸ್ಥೆಯ ಡಾ. ಎಂ. ಎಸ್. ಶೇಷಗಿರಿ ಇಂಜನಿಯರಿಂಗ್ ಕಾಲೇಜು ಹಿರಿಯ ಪ್ರಾಧ್ಯಾಪಕರಾದ ಪ್ರೊ. ಭಾರತಿ ವಿ. ಚಿನಿವಾಲರ ಅಧ್ಯಕ್ಷತೆ ವಹಿಸವರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕರಾದ ಡಾ. ಶೋಭಾ ನಾಯಕ ( ಮಹಿಳೆ ಅಂದು ಇಂದು)ವಿಷಯದ ಮೇಲೆ ಉಪನ್ಯಾಸ ನೀಡುವರು.
ಈ ವೇಳೆ ಆಶ್ರಯ ಫೌಂಡೇಶನ್ ಸಂಸ್ಥಾಪಕರಾದ
ನಾಗರತ್ನ ರಾಮಗೌಡ , ಮೀನಾಕ್ಷಿ ಸದಾನಂದ ಮಿಶ್ರಿಕೋಟಿ ಅವರಿಗೆ ಸನ್ಮಾನಿಸಲಾಗುವುದು.
ನಂದಿತಾ ಮಾಸ್ತಿಹೊಳಿಮಠ, ರೂಪಾ ಕೆ. ಪ್ರಸಾದ ಅವರಿಂದ ಸಂಗೀತ ಕಾರ್ಯಕ್ರಮ ಜರುಗುವುದು.
ನಾಲ್ಕನೇ ಸೋಮವಾರ 26 ರಂದು ಸಾಯಂಕಾಲ 8
ಗಂಟೆಗೆ ಸಂಗೀತ ಕಾರ್ಯಕ್ರಮ ಜರಗಲಿದ್ದು, ಕಾರಂಜಿಮಠ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಲಿದ್ದಾರೆ.
ಅರಳಿಕಟ್ಟಿ ವಿರಕ್ತಮಠದ ಶ್ರೀ ಮ.ನಿ.ಪ್ರ. ಶಿವಮರ‍್ತಿ ಮಹಾಸ್ವಾಮಿಗಳಿಂದ ( ಮಹಾಮಹಿಮ ಅಂಕಲಗಿ ಶ್ರೀ ಅಡವಿಸಿದ್ಧೇಶ್ವರರ ) ವಿಷಯದ ಮೇಲೆ ಅನುಭಾವ ಕಾರ್ಯಕ್ರಮ ಜರುಗುವುದು.
ಹಿರಿಯ ಸಾಹಿತಿಗಳಾದ ಶಿವಯೋಗಿ ಕುಸಗಲ್ಲ ಅವರು
ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಉಪನ್ಯಾಸಕರಾದ : ಡಾ. ಚಂದ್ರಶೇಖರ ಸ್ವಾಮಿಗಳು ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಈ ಶ್ರಾವಣ ಮಾಸದ ಕಾರ್ಯಕ್ರಮಕ್ಕೆ ಸಕಲ ಸದ್ಭಕ್ತರು ಆಗಮಿಸಬೇಕು ಎಂದು ಶ್ರೀ ಕಾರಂಜಿಮಠ ದಿಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.