23/12/2024
IMG-20240803-WA0009

ಬೆಳಗಾವಿ-03:ತಾಳ್ಮೆ ಎಂಬುದು ದುರ್ಬಲತೆಯಲ್ಲ. ಅದು ವ್ಯಕ್ತಿಯನ್ನು ದೀರ್ಘಕಾಲ ಸ್ಥಿರವಾಗಿ ನಿಲ್ಲಿಸುವ ಪ್ರಬಲ ಶಕ್ತಿ. ಹಾಗೆಯೇ ಶ್ರದ್ಧೆ ಎಂಬುದು ಕೇವಲ ಭಕ್ತಿಗೆ ಸೀಮಿತವಾಗಿಲ್ಲ. ಮಾಡುವ ಕೆಲಸದಲ್ಲಿ ತನ್ನನ್ನು ತಾನು ತನ್ಮಯವಾಗಿ ತೊಡಗಿಸಿಕೊಳ್ಳುವುದು. ವಿದ್ಯಾರ್ಥಿಗಳ ಜೀವನ ಬಾಲ್ಯದಿಂದಲೇ ಶ್ರದ್ಧೆ ಮತ್ತು ತಾಳ್ಮೆಯಿಂದ ಕೂಡಿರಬೇಕೆಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಅಭಿಪ್ರಾಯ ಪಟ್ಟರು. ಅವರು ನಾಗನೂರು ರುದ್ರಾಕ್ಷಿ ಮಠದ ಪ್ರಭುದೇವ ಸಭಾಗ್ರಹದಲ್ಲಿ ಜರುಗಿದ ಸಿದ್ಧರಾಮೇಶ್ವರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮುಂದುವರೆದು ಮಾತನಾಡಿದ ಅವರು ಸದೃಡ ಮನಸ್ಸು, ಏಕಾಗ್ರತೆ, ಪರಿಶ್ರಮ ಮತ್ತು ಮಾಡುವ ಕಾರ್ಯದಲ್ಲಿ ದೃಢತೆ ಇದ್ದರೆ ಯಾವ ಗುರಿಯೂ ಅಸಾಧ್ಯವಲ್ಲ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೆ ಎಲ್ ಈ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಧ್ಯಾಪಕ ಸೌರಭ ಕುಲಕರ್ಣಿ ಮಾತನಾಡಿ ಶಿಕ್ಷಣ ಪಡೆಯುವುದೆಂದರೆ ಒಂದು ರೀತಿಯ ತಪಸ್ಸು ಮಾಡಿದಂತೆ.‌ ಅದಕ್ಕಾಗಿ ವಿದ್ಯಾರ್ಥಿಗಳು ಅನೇಕ ರೀತಿಯ ತ್ಯಾಗಗಳನ್ನು ಮಾಡಬೇಕಾಗುತ್ತದೆ. ತ್ಯಾಗ, ಪರಿಶ್ರಮದ ಫಲವಾಗಿ ಉತ್ತಮ ಶಿಕ್ಷಣ ದೊರೆಯುತ್ತದೆ ಎಂದರು.
ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ ಬಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಇನ್ನೋರ್ವ ಅತಿಥಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎಮ್. ಜಯಶ್ರೀ, ಕಲಾ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಪ್ರಾಚಾರ್ಯ ಸಿದ್ದರಾಮ ರೆಡ್ಡಿ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ವಿಜ್ಞಾನ ವಿಭಾಗದ ಪ್ರಾಚಾರ್ಯೆ ಸ್ವಪ್ನ ಜೋಶಿ ಸ್ವಾಗತಿಸಿದರು‌ ಉಪನ್ಯಾಸಕರಾದ ವಿವೇಕ್ ಬಶೆಟ್ಟಿ ನಿರೂಪಿಸಿದರು. ಕಾಲೇಜು ವಿದ್ಯಾರ್ಥಿ ಶ್ರೀನಿಧಿ ವಂದಿಸಿದರು.

error: Content is protected !!