ರಾಜ್ಯ ಕಾಂಗ್ರೇಸ್ ಸರ್ಕಾರ ಆರ್ಥಿಕ ದಿವಾಳಿತನಕ್ಕೆ ಸಾಕ್ಷಿ ಎಂಬಂತೆ ದೇಶದ ಪ್ರಧಾನಿ ಜಗಮೆಚ್ಚಿದ ನಾಯಕ ನರೇಂದ್ರ ಮೋದಿಜಿ ಫೆ24 ರಂದು ವರ್ಚುಲ್ ಮೂಲಕ ಉದ್ಘಾಟನೆ ಮಾಡಿದ ಬೈಲಹೊಂಗಲದ ತಾಯಿ ಮಕ್ಕಳ ಆಸ್ಪತ್ರೆಯನ್ನು ಆರೋಗ್ಯ ಸಚಿವರು ಲೊಕಾರ್ಪಣೆ ಮಾಡಿರುವದನ್ನು ನೋಡಿದರೆ ಮಾಡಿ ಹೋದ ಕೆಲಸಕ್ಕೆ ಪುಕ್ಸಟ್ಟೆ ಹೆಸರು ಮಾಡಿಕೊಳ್ಳುತ್ತಿರುವದು ಹಾಸ್ಯಾಸ್ಪದ ಸಂಗತಿ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ರಾಜ್ಯ ಸರ್ಕಾರದ ವಿರುದ್ದ ತಿವ್ರ ವಾಗ್ದಾಳಿ ನಡೆಸಿದರು.
ಪತ್ರಿಕಾ ಪ್ರಕಟಣೆ ಮೂಲಕ ವಿಷಯ ಪ್ರಸ್ಥಾಪಿಸಿದ ಅವರು, ದೇಶದಲ್ಲಿ ಹೆಣ್ಣು ಮಕ್ಕಳು ಹೆರಿಗೆ ಸಂದರ್ಭದಲ್ಲಿ ಹಾಗೂ ಹೆರಿಗೆ ನಂತರ ನವಜಾತ ಶಿಸು ಆರೈಕೆಯಲ್ಲು ಅನುಭವಿಸುವ ಕಷ್ಟವನ್ನರಿತು ದೇಶಾದ್ಯಂತ 100ಹಾಸಿಗೆಯ ತಾಯಿ-ಮಗು ಆಸ್ಪತ್ರೆಗೆ ವಿಕಸಿತ ಭಾರತ ಯೋಜನೆಯಲ್ಲಿ ಕ್ರಮ ಕೈಗೊಂಡಿದ್ದರು.
ಈ ಯೋಜನೆಯಡಿಯಲ್ಲಿ ರಾಜ್ಯಕ್ಕೆ 6ಆಸ್ಪತ್ರೆಗಳು ಮುಂಜುರಾಗಿದ್ದು ಅದರಲ್ಲಿ 3 ಆಸ್ಪತ್ರೆ ಜನೆವರಿ ತಿಂಗಳಲ್ಲಿ ಮುಕ್ತಾಯಗೊಂಡು ಸೇವೆಗೆ ಸಿದ್ದವಾಗಿದ್ದವು. ಇದನ್ನರಿತ ಕೇಂದ್ರ ಸರ್ಕಾರ ಫೇ24 ರಂದು ಪ್ರಧಾನಿ ನರೇಂದ್ರ ಮೊದಿಯವರು ಗುಜರಾತಿನ ರಾಜ್ ಕೊಟ್ ದಿಂದ ದೇಶದಲ್ಲಿ ನಿರ್ಮಾಣವಾದ 100ಹಾಸಿಗೆಯ ತಾಯಿ-ಮಗುವಿನ ಆಸ್ಪತ್ರೆಯನ್ನು ಉದ್ಘಾಟಿಸಿದ್ದರು. ಆ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಆಗಿನ ಸಂಸದೆ ಮಂಗಲಾ ಅಂಗಡಿ, ಕೇಂದ್ರ ಸರ್ಕಾರದ ವೈದ್ಯಕೀಯ ಮುಖ್ಯಸ್ಥ ಸ್ಮೀತ್ ರಾವತ್ ತಂಡ, ಡಿಎಚ್ಓ ಡಾ.ಮಹೇಶ ಕೊಣಿ ಸೇರಿದಂತೆ ಅನೇಕ ಅಧಿಕಾರಿಗಳು ಜನಪ್ರತಿನಿಧಿಗಳು ಪಾಲ್ಗೊಂಡು ಉದ್ಘಾಟನೆಗೊಳಿಸಿದ ಆಸ್ಪತ್ರೆಯನ್ನು ಜಿಲ್ಲೆಯ ಮತ್ತು ತಾಲೂಕಿನ ಅಧಿಕಾರಿಗಳನ್ನು ಕರೆದುಕೊಂಡು ಆರೋಗ್ಯ ಸಚಿವರಾದ ದಿನೇಶ್ ಗುಂಡುರಾವ ಅವರು ಲೊಕಾರ್ಪಣೆ ಮಾಡಲು ಹೊರಟಿರುವದು ಯಾಕೆ ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಮುಡಿದೆ.
ರಾಜ್ಯ ಸರ್ಕಾರ ಅಭಿವೃದ್ಧಿ ಶೂನ್ಯವಾಗಿದ್ದು ರಾಜ್ಯದ ಜನತೆಗೆ ತಾವು ಮಾಡಲಾರದ ಕೆಲಸವನ್ನು ತಮ್ಮ ಸರ್ಕಾರವೆ ಮಾಡಿದೆ ಎಂಬ ತಪ್ಪು ಸಂದೇಶದ ಮೂಲಕ ಜನತೆಯನ್ನ ಒಲೈಸಿಕೊಳ್ಳಲು ಹೊರಟಿರುವದು ದುರಾದೃಷ್ಟಕರ.
ರಾಜ್ಯ ಸಚಿವರಿಗೆ ಅಧಿಕಾರಿಗಳಿಗೆ ಇಂತಹ ವಿಚಾರ ಮುಡಿರುವದು ನಿಜಕ್ಕು ಆಶ್ಚರಕರವಾಗಿದೆ.
ದೇಶದ ಪ್ರಧಾನಿಗಳು ಕೇಂದ್ರ ಸರ್ಕಾರದಿಂದ ಅನುದಾನ ನೀಡಿ ಕಿತ್ತೂರು ಕರ್ನಾಟಕದ ಬೈಲಹೊಂಗಲವನ್ನು ಗುರ್ತಿಸಿ ತಾಯಿ- ಮಗು ಆಸ್ಪತ್ರೆ ನೀಡಿದ್ದಲ್ಲದೆ ಅದನ್ನು ಉದ್ಘಾಟಿಸಿ ಜನರ ಸೇವೆಗೆ ನಿಡಿದರು ಅದನ್ನು ಜನರಿಗೆ ನೀಡದೆ ತಮ್ಮ ಸರ್ಕಾರದ ಸಾಧನೆ ಎಂಬಂತೆ ಅಭಿವೃದ್ಧಿಗೆ ಹಣ ಇಲ್ಲದೆ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್ ಸರ್ಕಾರದ ಸಾಧನೆಯ ಬಣ್ಣ ಹಚ್ಚಿ ಜನರ ಕಣ್ಣಿಗೆ ಮಣ್ಣು ಎರೆಚುವ ಕಾರ್ಯ ರಾಜ್ಯದಲ್ಲಿ ನಡೆಯುವದಿಲ್ಲ.
ಈ ರಾಜ್ಯವನ್ನಾಳಿದ ಮುತ್ಸದ್ದಿ ರಾಜಕಾರಣಿಯಲ್ಲೊಬ್ಬರಾದ ಮಾಜಿ ಮುಖ್ಯಮಂತ್ರಿ ದಿ.ಆರ್ ಗುಂಡೂರಾವ್ ಅವರ ಹಾಕಿಕೊಟ್ಟ ಹಾದಿ ಇದಲ್ಲ ಇಂತಹ ಹುಸಿ ಸುಳ್ಳಿನ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ಕಡಿವಾಣ ಬಿಳಬೇಕು. ಜಿಲ್ಲೆಯ ಜನ ಅತಿವೃಷ್ಟಿಯಲ್ಲಿ ತೊಂದರೆಯಲ್ಲಿರುವಾಗ, ರಾಜ್ಯ ಸರ್ಕಾರ ಹಗರಣಗಳ ಬಲೆಯಲ್ಲಿ ಸುತ್ತಿಕೊಂಡಿರುವಾಗ, ದಲಿತರ ಹಣ ನುಂಗಿದ ನುಂಗಣ್ಣರನ್ನ ಸರ್ಕಾರವನ್ನು ಉಳಿಸಿಕೊಳ್ಳಲು ಹಳೆ ಮಧ್ಯವನ್ನ ಹೊಸ ಬಾಟಲಿಯಲ್ಲಿ ಹಾಕಿ ಮರು ವ್ಯಾಪರಕ್ಕೆ ಇಳಿದ ಕಾಂಗ್ರೆಸ್ ಸರ್ಕಾರದ ನೀತಿಯನ್ನು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್,ಎಸ್. ಸಿದ್ದನಗೌಡರ ತಿವ್ರವಾಗಿ ಖಂಡಿಸಿದ್ದಾರೆ.