ಕೌಜಲಗಿ-02: ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಮುಖಂಡ ಡಾ.ರಾಜೇಂದ್ರ ಸಣ್ಣಕ್ಕಿ ಅವರ ನೇತೃತ್ವದಲ್ಲಿ ಪಟ್ಟಣದ ಕೌಜಲಗಿ ಅರ್ಬನ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ನೀಲಪ್ಪ ಬಾಳಪ್ಪ ಕೇವಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಮಹಾಂತಪ್ಪ ನೀಲಕಂಠಪ್ಪ ಶಿವನಮಾರಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನೀಲಪ್ಪ ಕೇವಟಿ ಅವರು ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ನೀಲಪ್ಪ ಬಾಳಪ್ಪ ಕೇವಟಿ ಅವರು ಆಯ್ಕೆಯಾಗಿದ್ದಾರೆಂದು
ಚುನಾವಣಾಧಿಕಾರಿ ಎಸ್ ಬಿ ಬಿರಾದಾರ್ ಪಾಟೀಲ ತಿಳಿಸಿದರು.
ನೂತನ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ
ಉಪಾಧ್ಯಕ್ಷರಾದ ಈರಣ್ಣ ಹುದ್ದಾರ. ಬ್ಯಾಂಕಿನ ಮಾಜಿ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ. ಎಂ ಎನ್ ಶಿವನಮಾರಿ,ಶಿವಾನಂದ ಲೋಕನ್ನವರ್. ಬಿ ಎ ಲೋಕನ್ನವರ.ಸುಭಾಸ ಕೌಜಲಗಿ,ಅಶೋಕ ಪಾಟೀಲ. ಗಂಗಾಧರ ಲೋಕನ್ನವರ, ಶಿವಲಿಂಗ ಮರೆಣ್ಣವರ, ಲಾಡಕಾನ ಮುಲ್ತಾನಿ,ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ಗ್ರಾಮ ಪಂಚಾಯತ ಅಧ್ಯಕ್ಷ ಅಶೋಕ ಉದ್ದಪ್ಪನವರ, ಎಸ್ ಬಿ ಹಳ್ಳೂರ,ಮಹೇಶ ಪಟ್ಟಣಶೆಟ್ಟಿ,ಶಂಕರ ಜ್ಯೋತಿನವರ, ರಾಯಪ್ಪ ಬಳೋಲದಾರ, ಹಾಸಿo ನಗಾರ್ಚಿ, ಬಸವರಾಜ ಜೋಗಿ, ಯಲ್ಲಪ್ಪ ಸುನ್ನಾಳ ಮುಂತಾದವರಿದ್ದರು.