ಚಿಕ್ಕೋಡಿ-01 :ಕುಡಚಿ ಪಟ್ಟಣದ ಕುಡಿಯುವ ನೀರಿನ ಘಟಕ (ಜಾಕ್ ವೆಲ್) ದುರಸ್ತಿಗೆ ಹೋದ ಸಮಯದಲ್ಲಿ ಕೃಷ್ಣಾ ನದಿ ಪ್ರವಾಹದಲ್ಲಿ ಎನ್ ಡಿ ಆರ್ ಎಫ್ ತಂಡ ಬೊಟ್ ಪಲ್ಟಿಯಾಗಿ ಭಾರಿ ದುರಂತ ತಪ್ಪಿದೆ.
ಗುರುವಾರ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಬಳಿಯ ಕೃಷ್ಣಾ ನದಿಯಲ್ಲಿ ಈ ಅವಘಡ ಸಂಭವಿಸಿದೆ, ಕೃಷ್ಣಾ ನದಿಯಲ್ಲಿ ಅಪಾಯದ ಮಟ್ಟವನ್ನು ಮೀರಿ ನೀರು ಹರಿಯುತ್ತಿವೆ ಜೊತೆಗೆ ಪ್ರವಾಹ ಪರಿಸ್ಥಿತಿ ಎದುರಾಗಿದರಿದೆ.
ಕುಡಚಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಜಾಕ್ ವೆಲ್ ಮುಳುಗಡೆಯಾಗಿದ್ದು, ಕಳೆದ ಒಂದು ದಿನಗಳಿಂದ ನೀರು ಬಾರದೇ ಇರೋದರಿಂದ ಎನ್ ಡಿ ಆರ್ ಎಫ್ ತಂಡ ಜೊತೆ ಸ್ಥಳೀಯ ವಾಟರ್ ಮ್ಯಾನ್ ಹಾಗೂ ಲೈಮನ್ ದುರಸ್ತಿಗೆ ತೆರಳಿದ್ದರು.
ನೀರಿನ ಸೆಳೆತಕ್ಕೆ ಶಿಲುಕಿ ಬೋಟ್ ಪಲ್ಟಿ ಆಗುತ್ತಿದಂತೆ ಆರು ಜನ ನಿರುಪಾಲಾಗಿದ್ದರು, ಅದೃಷ್ಟಾಂಶ ಎಲ್ಲರೂ ಲೈಫ್ ಜಾಕೆಟ್ ಬಳಸಿದರಿಂದ ಲೈನ್ ಮಾನ ಹಾಗೂ ವಾಟರ್ ಮ್ಯಾನ್ ನದಿಯಲ್ಲಿ ತೇಲುತ್ತಾ ನದಿಯಲ್ಲಿ ಮುಳುಗಿದ ಮರಗಳನ್ನು ಹಿಡಿದು ಜೀವ ರಕ್ಷಣೆ ಮಾಡಿಕೊಂಡಿದ್ದರು.
ದಡದಲ್ಲಿ ಇದ್ದ ಇನ್ನೊಂದು ಎನ್ ಡಿ ಆರ್ ಎಫ್ ತಂಡ ಘಟನೆ ಸಂಭವಿಸುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾಗಿ ಅವರ ರಕ್ಷಣಾ ಕಾರ್ಯಾಚರಣೆ ನಡೆಸಿ ಆರು ಜನರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ, ನಂತರ ಜಾಕ್ವೆಲ್ ಅನ್ನು ದುರಸ್ತಿ ಮಾಡಿ ಸಿಬ್ಬಂದಿ ಹಿಂದುರುಗಿದ್ದಾರೆ. ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ವರದಿಯಾಗಿದೆ.