ಬೆಳಗಾವಿ-31:-ಸ್ವಾತಂತ್ರ್ಯ ದಿನದ ಅಂಗವಾಗಿ ಅಗಸ್ಟ್ ೧೮-೮-೨೦೨೪ ಭಾನುವಾರ ನಗರದ ಜಿಲ್ಲಾ ಕ್ರೀಡಾಂಗಣ ದಲ್ಲಿ ಮುಂಜಾನೆ ೬.೦೦ ಗಂಟೆಯಿಂದ ಬೆಳಗಾವಿ ರನ್೨೦೨೪ ಓಟ(ಮ್ಯಾರಥಾನ್) ಕಾರ್ಯಕ್ರಮ ನಡೆಯಲಿದೆ ಬೆಳಗಾವಿ ಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಓಟದ ಆಟದಲ್ಲಿ ತಾವು ಸಹ ಯಶಸ್ವಿಗೊಳಿಸಬೇಕು ಎಂದು ಖ್ಯಾತ ವೈದ್ಯರಾದ ಡಾ//ರವಿ ಪಾಟೀಲ್ ಪತ್ರಿಗೋಷ್ಠಿ ಯಲ್ಲಿ ಸೋಮವಾರ ತಿಳಿಸಿದರು.
ಪತ್ರಿಕಾಗೋಷ್ಠಿ ನಡೆಸಿದ ಅವರು ಬೆಳಗಾವಿ ಅಪ್ಟೇಕರ್ ಸ್ಪೋರ್ಟ್ಸ್ ಫೌಂಡೇಶನ್ ವತಿಯಿಂದ ಈ ಕಾರ್ಯಕ್ರಮ ನಡೆಯುತ್ತಿರುವ ಹಿನ್ನಲೆಯಲ್ಲಿ ೩,೫,ಹಾಗೂ ೧೦ ಕಿ ಮೀ ಗಳ (ಓಟ)ಮ್ಯಾರಥಾನ್ ಆಗಿದ್ದು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಸುನೀಲ್ ಅಪ್ಟೇಕರ್,ವಿಲಾಸ ಪವಾರ ಮುಂತಾದವರು ಇದ್ದರು.