ಬೆಳಗಾವಿ-01 : ಬೆಳಗಾವಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರವಾಹ ಬಂದಿದೆ. ಆದರೆ ಸಂಸದ ಜಗದೀಶ ಶೆಟ್ಟರ್ ಇತ್ತ ಕಡೆ ಬಂದಿಲ್ಲವಲ್ಲ ಮೇಡಮ್ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಪ್ರಶ್ನಿಸಿದರು.
ಹೊಸದಾಗಿ ಸಂಸದರಾಗಿದ್ದಾರೆ, ಅವರ ಬಗ್ಗೆ ಈಗಲೇ ಮಾತನಾಡುವುದು ಬೇಡ ಎಂದು ಹೆಬ್ಬಾಳಕರ್ ಉತ್ತರಿಸಿದರು.
ಜನ ಮಳೆಯಿಂದ ತತ್ತರಿಸುತ್ತಿದ್ದಾರೆ. ಇಷ್ಟು ದೊಡ್ಡ ಸಮಸ್ಯೆಯಾಗಿದ್ದರೂ ಅವರು ಇತ್ತ ಸುಳಿದಿಲ್ಲ. ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಹೀಗಾದರೆ ಹೇಗೆ ಮೇಡಮ್ ಎಂದು ಪತ್ರಕರ್ತರು ಮರುಪ್ರಶ್ನಿಸಿದರು.
ಅವರಿಗೆ ಕೆಲಸ ಮಾಡಲು ಸಮಯಾವಕಾಶ ನೀಡೋಣ. ಸಂಸದರಾಗಿ ಬಹಳ ಸಮಯ ಆಗಿಲ್ಲ. ಈಗಲೇ ಅವರ ಬಗ್ಗೆ ಮಾತನಾಡುವುದು ಬೇಡ. ಮುಂದೆ ಚೆನ್ನಾಗಿ ಕೆಲಸ ಮಾಡಬಹುದು ಬಿಡಿ ಎಂದು ಸಚಿವರು ಅಲ್ಲಿಗೇ ವಿಷಯ ಮುಗಿಸಿದರು.