ಬೆಳಗಾವಿ-07: ೦೬-೦೧-೨೦೨೪
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಮೆಡಿಕಲ್ ವಿಭಾಗ ಹಾಗೂ ಸರಕಾರಿ ಪಾಲಿಟೆಕ್ನಿಕಲ್ ಕಾಲೇಜ್ ಬೆಳಗಾವಿಯ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದವತಿಯಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅತಿಥಿ ಹಾಗೂ ಅಧ್ಯಕ್ಷರ ಮೂಲಕ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಪ್ರಸ್ತಾವಿಕವಾಗಿ ಬ್ರಹ್ಮಾಕುಮಾರಿ ಅಶ್ವಿನಿ ಅಕ್ಕನವರು ಇವರು ಮಾತನಾಡುತ್ತ ವ್ಯಸನಗಳಿಗೆ ಮುಖ್ಯ ಕಾರಣ ಮನಸ್ಸು. ಮನಸ್ಸು ಆಕರ್ಷಣೆಗಳಿಗೆ ಒಳಗಾಗಿ ವಸ್ತು, ಸಂಬಂಧ, ಅಭಿರುಚಿಗಳಿಗೆ ದಾಸನಾಗುತ್ತದೆ. ಆತ್ಮದ ಇಂದ್ರೀಯಗಳಾದ ಮನಸ್ಸು, ಬುದ್ಧಿ, ಸಂಸ್ಕಾರಗಳಲ್ಲಿ ಪ್ರತಿ ಕರ್ಮಗಳ ನಿರ್ಣಯವಾಗುತ್ತವೆ. ಒಳ್ಳೆಯದು ಕೆಟ್ಟದ್ದು ಎರಡು ಸಂಸ್ಕಾರದ ರೂಪದಲ್ಲಿ ಮುದ್ರಿತವಾಗುತ್ತದೆ. ಸ್ನೇಹಿತರ ಸಂಗದ ಪ್ರಭಾವ ಬುದ್ಧಿಯ ಮೇಲೆ ಬಿರುತ್ತದೆ. ಸ್ವಯಂ ಪರಿವರ್ತನೆಯಿಂದ ಜೀವನ ಪರಿವರ್ತನೆ ಸಾಧ್ಯ. ಟಿವಿ ಹಾಗೂ ಮೋಬೈಲ ಮೂಲಕ ಕಣ್ಣುಗಳಿಗೆ ಹೊಡೆತ ಬೀಳುತ್ತದೆ. ಎನು ನೋಡುತ್ತೇವೆ, ಎನು ಕೇಳುತ್ತವೆ ಅದರಂತೆ ಆಗುತ್ತೇವೆ. ಒಳ್ಳೆಯದನ್ನು ನೋಡಿದಾಗ ಒಳ್ಳೆಯದನ್ನು ಕೇಳಿದಾಗ ಅದೆ ರೀತಿ ಒಳ್ಳೆಯದಾಗುತ್ತದೆ. ವ್ಯಸನ ಮುಕ್ತ ಜೀವನಕ್ಕಾಗಿ ಮೇಡಿಟೇಶನ ಮೇಡಿಸಿನ್ ಆಗಿದೆ ಎಂದು ತಿಳಿಸಿ ಕೆಲವು ನಿಮಿಷಗಳ ಕಾಲ ಮೇಡಿಟೇಶನ್ ಪ್ರಾಕ್ಟಿಕಲ್ ಅನುಭೂತಿ ಮಾಡಿಸಿದರು.
ಡಾ|| ಸಂಗೀತಾ ಬೆಳಗಾವಿಮಠ ಅವರು ಮಾತನಾಡುತ್ತ ವರ್ತಮಾನ ಸಮಯದಲ್ಲಿ ಬಹಳಷ್ಟು ಜನ ಯುವಕ ಯುವತಿಯುರು ಏಡ್ಸಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಯುವ ಸಮೂಹಕ್ಕೆ ಸರಿಯಾದ ಏಡ್ಸ್ ಬಗ್ಗೆ ಮಾಹಿತಿ ಅತೀ ಅವಶ್ಯಕ ಎಂದು ಯುವ ಜನರಿಗೆ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿದರು.
ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಾಸುದೇವ ಅಪ್ಪಾಜಿಗೋಳ ರವರು ಮಾತನಾಡುತ್ತ ವರ್ತಮಾಣದಲ್ಲಿ ಸಂಪೂರ್ಣವಾಗಿ ಆರೋಗ್ಯದಿಂದ ಇರಬೇಕಾದರೆ ಮೊದಲು ದೈಹಿವಾಗಿ, ಮಾನಸಿಕಾಗಿ, ಸಾಮಾಜಿಕವಾಗಿ, ಅಧ್ಯಾತ್ಮಿಕವಾಗಿ ಹಾಗೂ ಹಣಕಾಸಿನಿಂದ ಸದೃಡರಾಗಬೇಕು ಎಂದರು. ಈಶ್ವರೀಯ ವಿದ್ಯಾಲಯ ಮಾಡುತ್ತಿರುವ ಸೇವೆಯನ್ನು ಶ್ಲಾಗಿಸಿದರು.
ಈ ಕಾರ್ಯಕ್ರಮದಲ್ಲಿ ಮಹೇಶ ಡೊಳ್ಳಿನ ಕಾಲೇಜಿನ ಇಲೆಕ್ಟಿçಕಲ್ ಡಿಪಾರ್ಟಮೇಂಟಿನ ಹೆಚ್‌ಒಡಿ, ಬ್ರಹ್ಮಾಕುಮಾರ ಮನೋಹರ, ಮಹೇಶ ತುಬಾಕಿ, ಶಿವಲಿಂಗ ಮುಖನವರ, ಸುಚಿತಾ ತಲ್ವಾರ, ಸಂಜು ಕಲಾಲ, ಬ್ರಹ್ಮಾಕುಮಾರಿ ಸಂಪತ್ತಿ, ಬ್ರಹ್ಮಾಕುಮಾರಿ ಮೋಹಿನಿ ಮುಂತಾದವರು ಉಪಸ್ಥಿತರಿದ್ದರು. ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ
೧೫೦ ವಿದ್ಯಾರ್ಥಿಗಳು ಸಹ ಉಪಸ್ಥಿತರಿದ್ದರು. ಬ್ರಹ್ಮಾಕುಮಾರಿ ಸಾಧನಾ ಈಶ್ವರೀಯ ವಿಶ್ವ ವಿದ್ಯಾಲಯದ ಪರಿಚಯವನ್ನು ನೀಡಿದರು, ಬ್ರಹ್ಮಾಕುಮಾರ ಮಲ್ಲೇಶ ಇವರು ವ್ಯಸನ ಮುಕ್ತ ಗೀತೆ ಹಾಡಿದರು.ರಾಜಕುಮಾರ ಪಾಟೀಲ ಸ್ವಾಗತಿದರು, ಬ್ರಹ್ಮಾಕುಮಾರ ಶ್ರೀಕಾಂತ ಕಾರ್ಯಕ್ರಮ ನಿರೂಪಿಸಿದರು, ಶ್ರೀ ಕಿರಣಕುಮಾರ ವಂದಿಸಿದರು.