ಖಾನಾಪುರ-20: ಭಾರೀ ಮಳೆ ಹಾಗೂ ಸಾರಿಗೆ ಸೌಲಭ್ಯದ ಕೊರತೆಯಿಂದಾಗಿ ಖಾನಾಪುರ ತಾಲೂಕಿನ ಆಮಗಾಂವ ಗ್ರಾಮದ ಮಹಿಳೆಯನ್ನು ಗ್ರಾಮಸ್ಥರು ಸ್ಟ್ರೆಚರ್ ಮೇಲೆ ನಾಲ್ಕು ಕಿಲೋಮೀಟರ್ ದೂರದಲ್ಲಿ ಚಿಕಿತ್ಸೆಗಾಗಿ ಖಾನಾಪುರಕ್ಕೆ ಕರೆತಂದರು. ಆಮಗಾಂವ ಗ್ರಾಮದ ಹರ್ಷದಾ ಹರಿಶ್ಚಂದ್ರ ಘಾಡಿ (38) ಎಂಬ ಮಹಿಳೆಗೆ ಶುಕ್ರವಾರ ಸಂಜೆ ಎದೆನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಗ್ರಾಮದಲ್ಲಿ ಪ್ರಥಮ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ಮಳೆಯಿಂದಾಗಿ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದ್ದರಿಂದ ಗ್ರಾಮದ ಶಿಕ್ಷಕರೊಬ್ಬರು 108ಕ್ಕೆ ಕರೆ ಮಾಡಿ ಆಂಬ್ಯುಲೆನ್ಸ್ ತರುವಂತೆ ತಿಳಿಸಿದರು. ಗ್ರಾಮಸ್ಥರು ಬಿದಿರು ಮತ್ತು ಇತರ ವಸ್ತುಗಳನ್ನು ಬಳಸಿ ಸ್ಟ್ರೆಚರ್‌ಗಳನ್ನು ತಯಾರಿಸಿದರು.
ನಂತರ ಗ್ರಾಮದ ಹದಿನೈದು ಇಪ್ಪತ್ತು ಜನ ಮಹಿಳೆಯನ್ನು ಸ್ಟ್ರೆಚರ್ ಮೇಲೆ ಕಟ್ಟಿಕೊಂಡು ತುಂತುರು ಮಳೆಯಲ್ಲೇ ನಾಲ್ಕು ಕಿಲೋಮೀಟರ್ ದೂರ ನಡೆದು ಹೋಗಿದ್ದಾರೆ. ಮಹಿಳೆಯನ್ನು ಹೊತ್ತೊಯ್ಯಲು ಗ್ರಾಮಸ್ಥರು ಸರದಿಯಂತೆ ಸ್ಟ್ರೆಚರ್ ಹಿಡಿದಿದ್ದರು. ಮಳೆ ಬರದಂತೆ ಮಹಿಳೆಗೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿತ್ತು. ಆಕೆಯ ಮುಖದ ಮೇಲೆ ನೀರು ಬೀಳದಂತೆ ಒಬ್ಬ ವ್ಯಕ್ತಿ ಕೊಡೆ ಹಿಡಿದಿದ್ದ. ಕೊನೆಗೆ ನಾಲ್ಕು ಕಿಲೋಮೀಟರ್ ದೂರ ಕ್ರಮಿಸಿದ ಬಳಿಕ ಆಂಬ್ಯುಲೆನ್ಸ್ ನಲ್ಲಿ ಖಾನಾಪುರಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಪ್ರಾರಂಭವಾಯಿತು
ಮಹಿಳೆಯನ್ನು ಸ್ಟ್ರೆಚರ್ ಮೇಲೆ ಕಟ್ಟಿಕೊಂಡು ನಾಲ್ಕು ಕಿಲೋಮೀಟರ್ ದೂರ ಸುರಿವ ಮಳೆಯಲ್ಲೇ ನಡೆದುಕೊಂಡು ಹೋಗಿದ್ದರು