ಬೆಳಗಾವಿ-20:ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನಲ್ಲಿ ಕೆಲ ದಿನಗಳಿಂದ ಹೆಚ್ಚಿನ ಮಳೆಯಾಗುತ್ತಿದ್ದು, ಖಾನಾಪೂರ ತಾಲೂಕಿನ ಜಾಂಬೋಟಿಯಿಂದ ಬೆಳಗಾವಿ ನಗರಕ್ಕೆ ಸಂಪರ್ಕ ಕಲ್ಪಿಸುವ ಜಾಂಬೋಟಿ -ಪೀರಣವಾಡಿ ರಸ್ತೆ (ರಾಷ್ಟ್ರೀಯ ಹೆದ್ದಾರಿ 54) ಯಲ್ಲಿ ಕುಸಮಳಿ ಗ್ರಾಮದ ಹತ್ತಿರ ಇರುವ ಸೇತುವೆ ಹಳೆಯದಾಗಿರುವ ಕಾರಣ ಹಾಗೂ ಜಾಂಬೋಟಿಯಿಂದ ಖಾನಾಪೂರಕ್ಕೆ ಸಂಪರ್ಕ ಕಲ್ಪಿಸುವ (ರಾಜ್ಯ ಹೆದ್ದಾರಿ 31) ರಸ್ತೆ ಸಹ ಪ್ರಸ್ತುತದ ಸನ್ನಿವೇಶದಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಸೂಕ್ತವಿಲ್ಲದ ಕಾರಣ ಸದರಿ ಎರಡೂ ರಸ್ತೆಗಳಲ್ಲಿ ಭಾರಿ ವಾಹನಗಳ (Multi Excel Vehicles) ಸಂಚಾರವನ್ನು ಮುಂದಿನ ಆದೇಶದ ವರೆಗೆ ನಿರ್ಭಂದಿಸಿ ಜಿಲ್ಲಾಧಿಕಾರಿಯವರಾದ ಶ್ರೀ ಮೊಹಮ್ಮದ ರೋಷನ್ ರವರು ಆದೇಶಿಸಿರುತ್ತಾರೆ.
