23/12/2024
IMG-20240718-WA0008

ಬೆಳಗಾವಿ-18: ತಾಲೂಕಿನ ಕಡೋಲಿ ಗ್ರಾಮದಲ್ಲಿ 20 ವರ್ಷಗಳ ಹಿಂದೆ ಆ ಕುಟುಂಬದಿಂದ ನಡೆದಿದ್ದ ಕೊಲೆಯಿಂದಾಗಿ ಅಂದು ನರಕಮಯವಾಗಿದ್ದ ಕಡೋಲಿ ಗ್ರಾಮದಲ್ಲಿ ಇಂದು ಮತ್ತದೇ ಕುಟುಂಬದ ಒರ್ವನೀಚ ವ್ಯಕ್ತಿಯಿಂದಾಗಿ ಗ್ರಾಮದಲ್ಲಿ ಎರಡು ಕೊಮಿನ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಮುಸ್ಲಿಂ ಬಾಂಧವರ ಮೊಹರಮ್‌ ಹಬ್ಬವನ್ನು ಅವರಿಗಿಂತ ಹಿಂದೂ ಸಮುದಾಯದ ಜನರೇ ಹೆಚ್ಚಾಗಿ ಆಚರಿಸುತ್ತಾರೆ.

ಅಂತಹದಲ್ಲಿ ಕಡೋಲಿ ಗ್ರಾಮದ ಆಜಾದ ಗಲ್ಲಿಯ ಮುಸ್ಲಿಂ ಸಮುದಾಯದ ಕಾಮುಕ ಯುವಕ ಸಮೀರ ಅಬ್ಬಾಸ್‌ ಧಾಮಣೆಕರ ಎಂಬಾತ ನಿನ್ನೆ (ಬುಧವಾರ ಜುಲೈ.17) ತಾಲೂಕಿನ ಬುದ್ಧಿಮಾಂದ್ಯತೆ ಇರುವ ಯುವತಿಯನ್ನು ಕರೆದೊಯ್ದು ಅತ್ಯಾಚಾರ ಮಾಡಲು ಪ್ರಯತ್ನಿಸುವ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾನೆ. ತಕ್ಷಣ ಆತನನ್ನು ಗ್ರಾಮಸ್ಥರು ಹಿಡಿದು ಕಾಕತಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಕುರಿತು ಯುವಕನ ವಿರುದ್ಧ ಕಾಕತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನ್ಯಕೊಮಿನ ಯುವಕ ಮತ್ತೊಂದು ಕೊಮಿನ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರಿಂದ ಕಡೋಲಿಯ ನೂರಾರು ಗ್ರಾಮಸ್ಥರು ಠಾಣೆಗೆ ಮುಂದೆ ಜಮಾಯಿಸಿದ್ದರಿಂದ ಸ್ವತಃ ಡಿಸಿಪಿ ಸ್ನೇಹಾ ಪಿವಿ ಠಾಣೆಗೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಗ್ರಾಮದಲ್ಲಿ ಸಭೆ ಸೇರಿಸಿ ಪರಿಸ್ಥಿತಿ ಶಾಂತಿಯುತವಾಗುವಂತೆ ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

error: Content is protected !!