23/12/2024
IMG-20240708-WA0017

*ಸ್ತ್ರೀಯರು ಸಂಘಟಿತರಾದರೆ ಸಮಾಜ ಸುಧಾರಣೆ ಸಾಧ್ಯ* ಡಾ. ರಾಜೇಶ್ವರಿ ಹಿರೇಮಠ

ಬೆಳಗಾವಿ-08:ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನ ನಿರ್ವಹಿಸಿ ಸ್ತ್ರೀಯರು ಸಮಾಜಕ್ಕಾಗಿ ವೇಳೆಯನ್ನ ಮೀಸಲಿಡಬೇಕು. ಈ ಅವಧಿಯಲ್ಲಿ ಪರಸ್ಪರರ ನಡುವಿನ ಭೇದ ಭಾವ ಮರೆತು ಸಂಘಟಿತರಾಗಬೇಕು. ಸ್ತ್ರೀಯರು ಸಂಘಟಿತರಾದರೆ ಸಮಾಜ ಸುಧಾರಣೆ ಸಾಧ್ಯ ಎಂದು ಖ್ಯಾತ ಗಾಯಕಿ ಡಾ. ರಾಜೇಶ್ವರಿ ಹಿರೇಮಠ ಅಭಿಮತ ವ್ಯಕ್ತಪಡಿಸಿದರು.

ಅವರು  ಆಂಜನೇಯ ನಗರದ ಅನುಭವ ಮಂಟಪದಲ್ಲಿ ಅಂಜನಾದೇವಿ ಮಹಿಳಾ ಮಂಡಳದ ವತಿಯಿಂದ ಆಷಾಢ ಮಾಸದ ಪ್ರಯುಕ್ತ ಆಯೋಜಿಸಿದ್ದ “ಸಂಭ್ರಮದ ಸಿಂಚನ” ಎಂಬ ವಿನೂತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಅಂಜನಾದೇವಿ ಮಹಿಳಾ ಮಂಡಳದ ಅಧ್ಯಕ್ಷೆ ಲತಾ ಸಿಂಗ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮಂಡಳದ ಸದಸ್ಯರೆಲ್ಲರಿಂದ ಪ್ರಸ್ತುತ ಪಡಿಸಲಾದ “ಆಷಾಡ ಸಿಂಚನ” ಎಂಬ ನಾಟಕ ಎಲ್ಲರ ಮನಸೂರೆಗೊಂಡಿತು. ಆಷಾಢ ಮಾಸದ ಅಂಗವಾಗಿ ಸದಸ್ಯರೆಲ್ಲಾ ಗುಳ್ಳವ್ವ, ಬಸವಣ್ಣ ಹಾಗು ಪಾಂಡುರಂಗನ ಪೂಜೆ ವಿಶಿಷ್ಟವಾಗಿ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಸದಸ್ಯರೆಲ್ಲರೂ ಹಾಡಿದ ಭಕ್ತಿ ಭರಿತ ಗೀತೆಗಳು ಜನಮನ ರಂಜಿಸಿದವು. ಕಾರ್ಯಕ್ರಮದಲ್ಲಿ ಅಂಜನಾದೇವಿ ಮಹಿಳಾ ಮಂಡಳದ ಉಪಾಧ್ಯಕ್ಷೆ ಲಲಿತ ಹೂಗಾರ, ಕಾರ್ಯದರ್ಶಿ ವಿಜಯಲಕ್ಷ್ಮಿ ಪಾಟೀಲ, ಅಮೃತ ಹವಳ, ಪ್ರಭಾ ಹಾದಿಮನಿ, ಜಯಶ್ರೀ ದುಗ್ಗಾನಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಪ್ರಭಾ ಪಾಟೀಲ ಪ್ರಾರ್ಥಿಸಿದರು. ಸುಮಿತ್ರ ಕುಲಕರ್ಣಿ ಸ್ವಾಗತಿಸಿದರು ಗೀತಾ ಕಾವೇರಿ ವಂದಿಸಿದರು.

error: Content is protected !!