ನಿಪ್ಪಾಣಿ-07: ಪತ್ರಿ ಗೀಡದ ಎಲೆಗಳನ್ನು ಶಿವಲಿಂಗದ ಮೇಲೆ ಅರ್ಪಿಸಲಾಗುತ್ತದೆ. ಅದನ್ನು ಮನೆಯ ಬಳಿ ಪ್ರತಿಷ್ಠಾಪಿಸಿದ್ದರಿಂದ ಶಿವ ಸಂತಸಗೊಳ್ಳುತ್ತಾನೆ. ಬಿಲ್ವಪತ್ರೆಯ ಬೇರಿನ ನೀರನ್ನು ಹಣೆಯ ಮೇಲೆ ಹಚ್ಚುವುದರಿಂದ ಸಕಲ ತೀರ್ಥಯಾತ್ರೆಗಳ ಪುಣ್ಯ ಲಭಿಸುತ್ತದೆ ಎಂದು ಸರ್ವಲೋಕಾ ಸೇವಾ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ಹೇಳಿದರು.
ಇತ್ತೀಚೆಗೆ ನಿಪ್ಪಾಣಿ ತಾಲೂಕಿನ ಶಿರಪೇವಾಡಿ ಮಲ್ಲಿಕಾರ್ಜುನ ಮಹಾದೇವ ದೇವಸ್ಥಾನದ ಆವರಣದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮದ ನಿಮಿತ್ತ ಪತ್ರಿ ಗೀಡದ ಮಹತ್ವದ ಬಗ್ಗೆ ತಿಳಿಸಿದರು. ಯಾವುದೇ ತಿಂಗಳ ಚತುರ್ಥಿ, ಅಷ್ಟಮಿ, ನವಮಿ, ಚತುರ್ದಶಿ, ಅಮವಾಸ್ಯೆ ಮತ್ತು ಸಂಕ್ರಾಂತಿಯಂದು ಪತ್ರಿ ಗಿಡದ ಎಲೆಗಳನ್ನು ಕೀಳಬಾರದು. ಋಣದಿಂದ ಮುಕ್ತಿ ಹೊಂದಲು ಮನೆಯ ವಾಯುವ್ಯ ದಿಕ್ಕಿನಲ್ಲಿ ಬಿಲ್ವ ಗಿಡವನ್ನು ನೆಡಬೇಕು ಎಂದರು.
ಪ್ರತಿಯೊಬ್ಬರೂ ತಮ್ಮ ಜನ್ಮ ದಿನದಂದು ಪತ್ರಿ ಗೀಡ ನೆಡಬೇಕು ಎಂದು ಸಲಹೆ ನೀಡಿದರು.
ದಯಾನಂದ ಸ್ವಾಮಿ, ದಾದಾಸಾಹೇಬ ಪಾಟೀಲ್, ಗ್ರಾಪಂ ಸದಸ್ಯರು ಸೇರಿದಂತೆ ದೇವಸ್ಥಾನದ ಸದಸ್ಯರು ಉಪಸ್ಥಿತಿರಿದ್ದರು.