ಬೆಳಗಾವಿ-07:ಶ್ಯಾಮಪ್ರಸಾದ ಮುಖರ್ಜಿ ಅವರ ಜನ್ಮದಿನದ ಅಂಗವಾಗಿ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ನಡೆದ ಶ್ಯಾಮಪ್ರಸಾದ ಮುಖರ್ಜಿ ಅವರ ಚಿಂತನೆಗಳು ಮತ್ತು ಆದರ್ಶಗಳ ಕುರಿತು ನಡೆದ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಸಂಸದ ಜಗದೀಶ್ ಶೆಟ್ಟರ ಅವರು ಭಾಗವಹಿಸಿ ಮಾತನಾಡಿ ಡಾ| ಶ್ಯಾಮ ಪ್ರಸಾದ್ ಮುಖರ್ಜಿ ಅವರು ಜನಸಂಘದ ಸ್ಥಾಪನೆಗೂ ಮುಂಚಿನ ಹೋರಾಟಗಳು, ದೃಢ ಸಂಕಲ್ಪಗಳು, ಯಾವುದೇ ಸಂದರ್ಭದಲ್ಲೂ ಅಲ್ಲಾಡದೆ ಅಚಲವಾಗಿ ನಿಂತ ಅವರ ಸಿದ್ಧಾಂತ, ರಾಷ್ಟ್ರೀಯತೆಯ ಪರವಾದ ಹೋರಾಟದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದ ಅವರ ಆ ಮನೋಸ್ಥೈರ್ಯ ಹಾಗೂ ಅಂತಿಮವಾಗಿ ಅವರ ತ್ಯಾಗದ ಕುರಿತ ಇತಿಹಾಸವನ್ನು ಸಮಸ್ತ ಭಾರತೀಯರೂ ಅರಿತುಕೊಳ್ಳ ಬೇಕಾಗಿದ್ದು ಇಂದಿನ ಅಗತ್ಯ ಎಂದು ಹೇಳಿದರು.
ಮುಖ್ಯ ಭಾಷಣಕಾರ ಅನೂಪ್ ದೇಶಪಾಂಡೆ ಮಾತನಾಡಿ
ಪಾಕ್ ಆಕ್ರಮಿತ ಕಾಶ್ಮೀರವನ್ನು ಪುನಃ ವಶಪಡಿಸಿಕೊಂಡು ಅದನ್ನು ಭಾರತದ ಭಾಗವನ್ನಾಗಿ ಘೋಷಿಸಬೇಕು ಎಂದು ನೆಹರೂ ಅವರನ್ನು ಒತ್ತಾಯಿಸಿದ್ದ ಮುಖರ್ಜಿಯವರು, ಒಂದು ವೇಳೆ ಭಾರತ ತನ್ನ ಪ್ರದೇಶವನ್ನು ವಶಪಡಿಸಿಕೊಳ್ಳಲು ವಿಫಲವಾದರೆ ಅದೊಂದು ರಾಷ್ಟ್ರೀಯ ಅವಮಾನ ಎಂದು ಹೇಳಿದ್ದರು. “ಏಕ್ ದೇಶ್ ಮೆ ದೋ ವಿಧಾನ್, ದೋ ಪ್ರಧಾನ್ ಔರ್ ದೋ ನಿಶಾನ್ ನಹಿ ಚಲೇಂಗೆ ನಹಿ ಚಲೇಂಗೆ’ ಎನ್ನುವ ಘೋಷಣೆಯ ಮೂಲಕ ಒಂದೇ ದೇಶದ ಎರಡು ಸಂವಿಧಾನ, ಎರಡು ಗುರಿ, ಎರಡು ಬಾವುಟಗಳನ್ನು ಗಟ್ಟಿ ಧ್ವನಿಯಲ್ಲಿ ನಿಯಲ್ಲಿ ವಿರೋಧಿಸಿದ ಅವರು, 1951ರ ಅ. 21ರಂದು ಭಾರತೀಯ ಜನಸಂಘವನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿದ್ದರು ಎಂದು ಹೇಳಿದರು.ನಂತರ ಬೆಳಗಾವಿ ಗ್ರಾಮಂತರ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ್ ಮಾತನಾಡಿ
ಶ್ಯಾಮಪ್ರಸಾದ ಮುಖರ್ಜಿಯವರು ಅಂದು ನೆಟ್ಟ ಜನಸಂಘವೆನ್ನುವ ಗಿಡವು ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ. ಆಡ್ವಾಣಿ, ನರೇಂದ್ರ ಮೋದಿ ಮುಂತಾದ ಹಿರಿಯರಿಂದ ನೀರೆರೆಸಿಕೊಂಡು ಇಂದು ಹೆಮ್ಮರವಾಗಿ ಬೆಳೆದಿದೆ . ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸುವ ಮೂಲಕ ಭಾರತದ ಸಮಗ್ರತೆಯನ್ನು ಎತ್ತಿ ಹಿಡಿಯುವ ಸಾಹಸದಲ್ಲಿ ಯಶಸ್ಸನ್ನು ಕಂಡಿದೆ. ಪ್ರಬಲ ಇಚ್ಛಾಶಕ್ತಿ ಯೊಂದಿಗೆ ಕಾಣುವ ಯಾವ ಕನಸುಗಳೂ ನನಸಾಗದೇ ಉಳಿಯಲಾರವು ಎನ್ನುವುದಕ್ಕೆ ಶ್ಯಾಮ ಪ್ರಕಾಶ ಮುಖರ್ಜಿಯವರ ಕನಸುಗಳೇ ಸಾಕ್ಷಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ, ಮಾಜಿ ಶಾಸಕರಾದ ಮಹಾಂತೇಶ ದೊಡಗೌಡರ, ಅರವಿಂದ ಪಾಟೀಲ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹಾಂತೇಶ ಚಿನ್ನಪ್ಪಗೌಡರ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಈರಣ್ಣ ಅಂಗಡಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ದೇಶಪಾಂಡೆ, ಧನಶ್ರೀ ದೇಸಾಯಿ,ಕೆ.ವಿ.ಪಾಟೀಲ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್ ಎಸ್ ಸಿದ್ದನಗೌಡರ್,ಪ್ರಮೋದ್ ಕೋಚೇರಿ, ಜಿಲ್ಲಾ ಮಾಧ್ಯಮ ಪ್ರಮುಖ್ ಸಚಿನ್ ಕಡಿ, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಸಂತೋಷ ದೇಶನೂರ,ಜಿಲ್ಲಾ ಎಸ್.ಸಿ ಮೋರ್ಚಾ ಅಧ್ಯಕ್ಷ ಯಲ್ಲೇಶ್ ಕೋಲಕಾರ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗುರು ಹೀರೆಮಠ,ಆನಂದ ಅತ್ತುಗೋಳ,ಆನಂದ ಬಾಗೋಡಿ, ಬಾಪೂಜಿ ಕದಂ,ಗೌಡಪ್ಪ ಹೊಸಮನಿ,ಸಂಪ್ರೀತ ತಿಗಡಿ, ಬಸವರಾಜ ಪೂಜೇರ , ವೀರಭದ್ರ ಪೂಜೇರ,ವಿಠ್ಠಲ್ ಸಾಯಣ್ಣವರ ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು