ಎರಡು ವರ್ಷ ಬೆಳಗಾವಿ ಜಿಲ್ಲಾಧಿಕಾರಿ ಆಗಿದ್ದ ನಿತೇಶ ಪಾಟೀಲ ಅವರನ್ನು ಸಣ್ಣ ಉದ್ದಿಮೆಗಳ ನಿರ್ದೇಶಕರಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ .
ಇನ್ನು ನೂತನ ಜಿಲ್ಲಾಧಿಕಾರಿ ಆಗಿ 2015ರ ಬ್ಯಾಚನ ಮೊಹಮ್ಮದ್ ರೋಷನ ಹೆಸ್ಕಾಂ ಎಂಡಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕ ಸರ್ಕಾರ ಆಡಳಿತ ವರ್ಗದಲ್ಲಿ ಮೇಜರ್ ಸರ್ಜರಿ ಮಾಡುತ್ತಿದೆ. ಇತ್ತೀಚಿಗೆ ಸರ್ಕಾರ 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು . ಇದೀಗ ಕರ್ನಾಟಕ ಸರಕಾರ 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿ.
ಬೆಳಗಾವಿಗೆ ನೂತನ ಜಿಲ್ಲಾಧಿಕಾರಿ ಯಾಗಿ ಮೊಹಮ್ಮದ್ ರೋಷನ್ ರವರನ್ನು ಆಯ್ಕೆ ಮಾಡಿದೆ. ಸಂತೋಷದ ವಿಷಯ ಬೆಳಗಾವಿ ಗಡಿನಾಡಿನ ಜನರ ಪರವಾಗಿ. ಕನ್ನಡಿಗರ ಪರವಾಗಿ. ಹಿಂದುಳಿದ ಸಮುದಾಯದ ಪರವಾಗಿ. ಬಡವರ ಪರವಾಗಿ ರೈತರ ಪರವಾಗಿ ಹಾಗೂ ಸರ್ವ ಜನಾಂಗದ ಪರವಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ನೂತನ ಜಿಲ್ಲಾಧಿಕಾರಿಗಳು ತಮ್ಮ ಸೇವೆ ಸಲ್ಲಿಸುವಲ್ಲಿ ಜನರ ಪರ ಧ್ವನಿಯಾಗಿ ಯಶಸ್ವಿಯಾಗಲಿ. ಎಂದು ಬೆಳಗಾವಿ ಜನರ ಪರವಾಗಿ ನೂತನ ಜಿಲ್ಲಾಧಿಕಾರಿಗಳಿಗೆ *ಸಾಮಾಜಿಕ ಹೋರಾಟಗಾರ ಮಹೇಶ್ ಎಸ್ ಶಿಗೀಹಳ್ಳಿ ರವರು ಅಭಿನಂದನೆ ಸಲ್ಲಿಸುವ ಮುಖಾಂತರ ಸ್ವಾಗತ ಕೋರಿದ್ದಾರೆ*.