ಬೆಳಗಾವಿ-೨೮: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾರಿಹಾಳ ಗ್ರಾಮದ ಎಸ್. ಸಿ ಕಾಲೋನಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶುಕ್ರವಾರ ಭೂಮಿ ಪೂಜೆ ನೇರವೇರಿಸುವ ಮೂಲಕಚಾಲನೆ ನೀಡಿದರು.
ಅತ್ಯಂತ ಸುಸಜ್ಜಿತವಾದ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಾಣ ಮಾಡಲು ನಿರ್ಧರಿಸಿರುವ ಕ್ಷೇತ್ರದ ಶಾಸಕರೂ ಆಗಿರುವ ಲಕ್ಷ್ಮೀ ಹೆಬ್ಬಾಳಕರ್, ಗ್ರಾಮಸ್ಥರ ಬಹು ಬೇಡಿಕೆಗೆ ಸ್ಪಂದಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಗ್ರಾಮಸ್ಥರ ಸಮ್ಮುಖದಲ್ಲಿ ಪೂಜೆಯನ್ನು ನೆರವೇರಿಸಲಾಯಿತು.
ಈ ಸಮಯದಲ್ಲಿ ಬಸವರಾಜ ಮ್ಯಾಗೋಟಿ, ಗಿರಿಜಾ ಪಾಟೀಲ, ಪ್ರಕಾಶ ಯಲ್ಲಪ್ಪನವರ, ಬಸವರಾಜ ಹಿತ್ತಲಮನಿ, ಸಾಗರ ಪೂಜಾರ, ಈರಣ್ಣ ಹಿರವಣ್ಣವರ, ಆಸಿಫ್ ಮುಲ್ಲಾ, ಶಿವಾಜಿ ಗುರವ್, ಗುಡದಪ್ಪ ಗುರವ್, ಕೆಂಚಪ್ಪ ಕಲ್ಲಣ್ಣವರ, ಯಲ್ಲಗುಂಡ ಸೀತಿಮನಿ, ಶಂಕರ್ ಸೊಗಲಿ, ರಮೇಶ ಅಕ್ಕತಂಗೇರಹಾಳ, ಸಮೀರ್ ಮುಲ್ಲಾ, ದಿಲಾವರ್ ಪೆಂಡಾರಿ ಮುಂತಾದವರು ಹಾಜರಿದ್ದರು.