23/12/2024
IMG-20240627-WA0014

      ಆರೋಗದತ್ತ ವಿಶೇಷ ಕಾಳಜಿ ವಹಿಸಿ’
ಬೆಳಗಾವಿ-೨೮: ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಒತ್ತಡದ ಬದುಕಿನಲ್ಲಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.

ಬುಧವಾರ ಹಮ್ಮಿಕೊಂಡಿದ್ದ ಹಿರಿಯ ಪತ್ರಕರ್ತರಾದ ಮನೀಷಾ ಸುಬೇದಾರ, ಎಚ್‌.ವಿ.ನಾಗರಾಜ ಅವರ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪತ್ರಕರ್ತರ ಸಂಘಗಳು ಪ್ರತಿಷ್ಠೆ, ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ, ಪತ್ರಕರ್ತರ ಕಲ್ಯಾಣಕ್ಕಾಗಿ ದುಡಿಯಬೇಕು. ಹಿರಿಯ ಪತ್ರಕರ್ತರು ಕಿರಿಯ ಪತ್ರಕರ್ತರ ಹಿತ ಗಮನದಲ್ಲಿ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು’ ಎಂದು ಕರೆ ನೀಡಿದರು.

‘ಪತ್ರಕರ್ತರು ತಮ್ಮ ಕೆಲಸಕ್ಕೊಂದು ಚೌಕಟ್ಟು ಹಾಕಿಕೊಳ್ಳಬೇಕು. ಅದರಡಿ ಯೋಜನಾಬದ್ಧವಾಗಿ ಕಾಯಕ ಮುಂದುರಿಸಬೇಕು. ಪತ್ರಿಕಾ ರಂಗಕ್ಕೆ ಧುಮುಕುವವರಲ್ಲಿ ಸಾಮಾಜಿಕ ಪ್ರಜ್ಞೆ ಬೇಕು’ ಎಂದು ಪ್ರತಿಪಾದಿಸಿದರು.

ಮನೀಷಾ ಸುಬೇದಾರ, ‘ಪ್ರಸ್ತುತ ದಿನಗಳಲ್ಲಿ ತನಿಖಾ ಪತ್ರಿಕೋದ್ಯಮ ಕಡಿಮೆಯಾಗುತ್ತಿದೆ. ಯುವ ಪತ್ರಕರ್ತರು ಅದರತ್ತ ಗಮನ ಹರಿಸಬೇಕು. ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಒತ್ತು ಕೊಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಪತ್ರಕರ್ತರಾದವರು ನೊಂದವರ ಧ್ವನಿಯಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
ಎಚ್‌.ವಿ.ನಾಗರಾಜ, ‘ಮೂರು ದಶಕಗಳಿಂದ ಬೆಳಗಾವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇಲ್ಲಿನ ಪತ್ರಿಕಾ ಬಳಗ ನನಗೆ ಕೊಟ್ಟ ಪ್ರೋತ್ಸಾಹ ಅನನ್ಯ. ನನ್ನ ಬದುಕಿನ ಕೊನೆ ಉಸಿರು ಇರುವವರೆಗೂ ಪತ್ರಕರ್ತನಾಗಿ ದುಡಿಯಲಿದ್ದೇನೆ’ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ, ‘ಬೆಳಗಾವಿಯಲ್ಲಿ ಪತ್ರಕರ್ತರ ಭವನ ನಿರ್ಮಿಸಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದ ಇದೆ. ಎಲ್ಲ ಪತ್ರಕರ್ತರು ಚರ್ಚಿಸಿ, ವಿಧಾನಮಂಡಲ ಚಳಿಗಾಲದ ಅಧಿವೇಶನದೊಳಗೆ ಒಮ್ಮತದ ನಿರ್ಧಾರ ಕೈಗೊಳ್ಳೋಣ’ ಎಂದು ತಿಳಿಸಿದರು.

ವಿವಿಧ ಮಾಧ್ಯಮ ಸಂಸ್ಥೆಗಳ ಪತ್ರಿಕಾ ವರದಿಗಾರರು,ಪೋಟೋಗ್ರಾಪರಗಳು ನಿರೂಪಣೆಯನ್ನು ಸುನೀತಾ ದೇಸಾಯಿ ಮಾಡಿದರು.

error: Content is protected !!