ಬೆಳಗಾವಿ-೨೪:ಭಾರತೀಯ ಜನತಾ ಪಕ್ಷದ ಸಂಸ್ಥಾಪಕ ಎಂದೇ ಕರೆಯಲಾಗುತ್ತಿರುವ ಭಾರತೀಯ ಜನ ಸಂಘದ
ಉತ್ತರಾಧಿಕಾರಿ ಶ್ಯಾಮ ಪ್ರಸಾದ ಮುಖರ್ಜಿ ಅವರ ಪುಣ್ಯತಿಥಿಯನ್ನು ಭಕ್ತಿ ಭಾವದಿಂದ
ಆಚರಣೆ ಮಾಡಲಾಯಿತು.
ಮಹಾನಗರ ಪಾಲಿಕೆಯ ವಾರ್ಡ ನಂಬರ 43 ರಲ್ಲಿ ಬರುವ ಚಿದಂಬರೇಶ್ವರ ದೇವಸ್ಥಾನದ
ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖರ್ಜಿ ಅವರ ಭಾವಚಿತ್ರಕ್ಕೆ
ಪುಷ್ಪ ನಮನ ಮಾಡಲಾಯಿತು.
ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ
ಅಧ್ಯಕ್ಷೆ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ ಗಿರೀಶ ಧೋಂಗಡಿ ಸೇರಿದಂತೆ ಮತ್ತಿತರರು ಈ
ಸಂದರ್ಭದಲ್ಲಿ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿದರು.