ಬೆಳಗಾವಿ-೨೪: ನಾಲ್ಕೈದು ದಿನಗಳಲ್ಲಿ ಲವ್ ಜಿಹಾದ್ ಸಂಬಂಧ ಐದನೂರಕ್ಕೂ ಹೆಚ್ಚು ಕರೆಗಳು ಬಂದಿವೆ. ಈ ಪೈಕಿ ನೂರಕ್ಕೂ ಹೆಚ್ಚು ಕರೆಗಳು ಹೊರ ರಾಷ್ಟ್ರಗಳಿಂದ ಬಂದಿವೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ ಹೇಳಿದರು.
ಬೆಳಗಾವಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸಹಾಯವಾಣಿ ಘೋಷಣೆ ಮಾಡಿದ ಬಳಿಕ ಪಾಕಿಸ್ತಾನ ಸೇರಿ ಅರಬ್ ರಾಷ್ಟ್ರಗಳಿಂದ ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿದ್ದಾರೆ. 70 ಕರೆಗಳು ಮುಸ್ಲಿಂರ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಹಿಂದೂ ಮಹಿಳೆಯರು ಕರೆ ಮಾಡಿ, ತಮಗೆ ರಕ್ಷಣೆ ಕೊಡುವಂತೆ ಕೇಳಿದ್ದಾರೆ ಎಂದು ಹೇಳಿದರು.
ನೇಹಾ ಹಿರೇಮಠ ಹತ್ಯೆ ಪ್ರಕರಣ ಬಳಿಕ ಹುಬ್ಬಳ್ಳಿಯಲ್ಲಿ ಐದು ಘಟನೆಗಳು ನಡೆದಿವೆ. ಹಾಗಾಗಿ, ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಹಿಂದೂ ಮಹಿಳೆಯರ ರಕ್ಷಣೆ ಸಲುವಾಗಿ ಹುಬ್ಬಳ್ಳಿಯಲ್ಲಿ ಸಹಾಯವಾಣಿ ಆರಂಭಿಸಿದ್ದೇವೆ. ಹಿಂದೂ ಮಹಿಳೆಯರು ಧೈರ್ಯವಾಗಿ ಓಡಾಡಲು ಧಾರವಾಡದಲ್ಲಿ 50 ಮಹಿಳೆಯರಿಗೆ ತ್ರಿಶೂಲ ಧೀಕ್ಷೆ ನೀಡಿದ್ದೇವೆ. ಮಾನಸಿಕವಾಗಿ ಧೈರ್ಯ, ಸ್ಥೈರ್ಯ ತುಂಬುವ ಕೆಲಸ ಶ್ರೀರಾಮ ಸೇನೆ ಮಾಡಿದೆ. ಕರ್ನಾಟಕದಲ್ಲಿ ನೂರು ಕಡೆ ತ್ರಿಶೂಲ ಧೀಕ್ಷೆ ಕೊಡುವ ಮೂಲಕ ಹಿಂದೂ ಹುಡುಗಿಯರ ರಕ್ಷಣೆ ಮಾಡುವುದು ನಮ್ಮ ಗುರಿ ಎಂದು ಪ್ರಮೋದ ಮುತಾಲಿಕ್ ಹೇಳಿದರು.
ದರ್ಶನ ಪತ್ನಿ ವಕೀಲರ ಕಡೆ ಹೋಗುವ ಬದಲು, ಕಣ್ಣೀರಿನಲ್ಲಿ ಕೈ ತೊಳೆಯುತ್ತಿವ ರೇಣುಕಾಸ್ವಾಮಿ ಪತ್ನಿಯ ಮನೆಗೆ ಹೋಗಿ ಆರ್ಥಿಕ ಸಹಾಯ ಮಾಡಬೇಕು. ಇನ್ನು ದರ್ಶನ ಕೊಲೆ ಪ್ರಕರಣದಲ್ಲಿ ಕೆಲ ಸಚಿವರು ರಕ್ಷಣೆ ಮಾಡುತ್ತಿದ್ದಾರೆ. ಹಾಗಾಗಿ, ಪೊಲೀಸರ ಮೇಲೆ ಜನರು ನಂಬಿಕೆ ಕಳೆದುಕೊಳ್ಳುತ್ತಿದ್ದು, ಸೂಕ್ತ ತನಿಖೆ ನಡೆಸಿ ರೇಣುಕಾಸ್ವಾಮಿ ಸಾವಿಗೆ ನ್ಯಾಯ ದೊರಕಿಸಿ ಕೊಡುವಂತೆ ಪ್ರಮೋದ್ ಮುತಾಲಿಕ ಆಗ್ರಹಿಸಿದರು.