ಬೆಳಗಾವಿ-೨೩:ಬಿಜೆಪಿ ಉತ್ತರ ವಿಭಾಗದ ವತಿಯಿಂದ ಬೂತ್ ಮಟ್ಟದಲ್ಲಿ ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ವಿರುದ್ಧ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿ ಯುವ ಮುಖಂಡರಾದ ಕಿರಣ ಜಾಧವ, ಉಜ್ವಲಾ ಬಡವನ್ನಾಚೆ, ಪ್ರಜ್ಞಾ ಶಿಂಧೆ, ಪ್ರಿಯಾಂಕಾ ಕಲಘಟಕರ, ಸವಿತಾ ಕರಡಿ, ಶಿಲ್ಪಾ ಕೇಕರೆ, ರಾಜನ್ ಜಾಧವ ಸೇರಿದಂತೆ ಅಮೃತಾ ಕಾರೇಕರ, ಆರತಿ ಪಟೋಳೆ ಸೇರಿದಂತೆ ಮಹಿಳಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಡೆಂಗೆ, ಮಲೇರಿಯಾ ಸೋಂಕು ನಡೆಯುತ್ತಿದೆ. ಕಿರಣ ಜಾಧವ ಮಾತನಾಡಿ, ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಅದರ ಬಗ್ಗೆ ಕಾಳಜಿ ವಹಿಸಿ ತಮ್ಮ ಆರೋಗ್ಯವನ್ನು ಕೆಡದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬೆಳಗಾವಿ ಉತ್ತರ ವಿಭಾಗದ ಪ್ರತಿ ಪ್ರದೇಶದಲ್ಲಿ ಇಂದಿನಿಂದ ಡೆಂಗ್ಯೂ-ಚಿಕೂನ್‌ಗುನ್ಯಾ ಮತ್ತು ಮಲೇರಿಯಾ ಲಸಿಕಾ ಚಟುವಟಿಕೆಗಳನ್ನು ಉತ್ತೇಜಿಸಲಾಗುತ್ತಿದೆ ಎಂದು ಕಿರಣ ಜಾಧವ್ ಈ ಸಂದರ್ಭದಲ್ಲಿ ತಿಳಿಸಿದರು. ಇದರ ಸದುಪಯೋಗವನ್ನು ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಆಡಳಿತ ಮಂಡಳಿ ಮಾಡಬೇಕಿದೆ ಎಂದರು.
ಬೂತ್ ಮಟ್ಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ವಿಶೇಷ ಶ್ರಮದಿಂದ ಈ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಹೇಳಿದರು.