ಬೆಳಗಾವಿ-೨೩:ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಪಿಕೆಪಿಎಸ್ ಕ್ಷೇತ್ರದಿಂದ ತುಕ್ಕಾನಟ್ಟಿಯ ಶಿವಪ್ಪ ಯಲ್ಲಪ್ಪ ಮರ್ದಿ, ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ಪಿಕೆಪಿಎಸ್ ಕ್ಷೇತ್ರದಿಂದ ಚಿಕ್ಕೋಡಿಯ ಜಗದೀಶ ಮಲ್ಲಿಕಾರ್ಜುನ ಕವಟಗಿಮಠ, ರಾಯಬಾಗ ತಾಲೂಕಿನ ಪಿಕೆಪಿಎಸ್ ಕ್ಷೇತ್ರದಿಂದ ಕಂಕಣವಾಡಿಯ ಲಕ್ಷ್ಮೀಕಾಂತ ಮುರಾರರಾವ ದೇಸಾಯಿ, ದೇಸಾಯಿ.
ಅಥಣಿ ಹಾಗೂ ಕಾಗವಾಡ ತಾಲೂಕಿನ ಪಿಕೆಪಿಎಸ್ ಕ್ಷೇತ್ರದಿಂದ ಹುಲಗಬಾಳಿಯ ಶಂಕರಗೌಡ ರಾಮಗೌಡ ಪಾಟೀಲ, ಪಟ್ಟಣ ಸಹಕಾರ ಬ್ಯಾಂಕ್‌ಗಳ ಕ್ಷೇತ್ರದಿಂದ ಬೆಳಗಾವಿಯ ಬಾಳಪ್ಪ ಬಸಪ್ಪ ಕಗ್ಗಣಗಿ, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ ಮೆಳವಂಕಿಯ ಬಸಗೌಡ ದುಂಡನಗೌಡ ಪಾಟೀಲ, ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳ ಕ್ಷೇತ್ರದಿಂದ ಉಮೇಶ ಬಸನಗೌಡ ಪಾಟೀಲ.
ಪತ್ತಿನ ಸಹಕಾರ ಸಂಘಗಳ ಹಾಗೂ ನೌಕರರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಮೂಡಲಗಿಯ ವರ್ಧಮಾನ ಗುಂಡಪ್ಪ ಬೋಳಿ, ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ಹೊಸೂರಿನ ಈಶ್ವರಚಂದ್ರ ಬಸಪ್ಪ ಇಂಗಳಗಿ, ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಹಳ್ಳೂರಿನ ಬಸಪ್ಪ ಗುರುಪಾದಪ ಸಂತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ