ಬೆಂಗಳೂರು-೨೨:ಶನಿವಾರ (ಇಂದು) ೨೨-೦೬-೨೦೨೪ ರಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ ಅನಿಲ ಬೆನಕೆ ಅವರು ರೇಲ್ವೆ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ. ವಿ. ಸೋಮಣ್ಣಾ ಜಿ ಅವರನ್ನು ಭೇಟಿ ಮಾಡಿ, ಬೆಳಗಾವಿ ರೈಲು ನಿಲ್ದಾಣದಲ್ಲಿ ಛತ್ರಪತಿ ಶ್ರೀ. ಶಿವಾಜಿ ಮಹಾರಾಜರ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಮೂರ್ತಿಯನ್ನು ಅಳವಡಿಸುವಂತೆ ಅನಿಲ ಬೆನಕೆ ಅವರು ರೇಲ್ವೆ ಸಚಿವಾಲಯದ ರಾಜ್ಯ ಸಚಿವರಿಗೆ ಮನವಿ ಮಾಡಿದರು
ಈ ಸಂದರ್ಭದಲ್ಲಿ ಮಾತನಾಡಿದ ಅನಿಲ ಬೆನಕೆ, ಬೆಳಗಾವಿ ರೈಲು ನಿಲ್ದಾಣದಲ್ಲಿ ಛತ್ರಪತಿ ಶ್ರೀ. ಶಿವಾಜಿ ಮಹಾರಾಜರ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಮೂರ್ತಿಯನ್ನು ಅಳವಡಿಸಲು ನಿರಂತರ ಬೇಡಿಕೆ ಇದೆ. ಬೆಳಗಾವಿಯು ಸಾಂಪ್ರದಾಯಿಕ ನಗರಿಯಾಗಿದೆ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿವ ಭಕ್ತರು ಇದ್ದಾರೆ ಮತ್ತು ಛತ್ರಪತಿ ಶ್ರೀ. ಶಿವಾಜಿ ಮಹಾರಾಜರೊಂದಿಗೆ ಭಾವನಾತ್ಮಕವ ಬಾಂಧವ್ಯವನ್ನು ಹೊಂದಿರುತ್ತಾರೆ. ಅಲ್ಲದೇ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಬೆಳಗಾವಿಗೆ ಭೇಟಿ ನೀಡಿದ್ದರು. ಅವರ ಆದರ್ಶಗಳು ಭಾರತೀಯ ಎಲ್ಲರಿಗು ಸ್ಫೂರ್ತಿ. ಮರಾಠಾ ಲೈಟ್ ಇನ್‌ಫ್ರಂಟ್ರಿ ರೆಜಿಮೇಂಟಲ್ ಸೆಂಟರ್ ಕ್ಯಾಂಟೋನ್ಮೆAಟ್ ಕ್ಯಾಂಪ್ ಪ್ರದೇಶದಲ್ಲಿದೆ. ಅಲ್ಲದೆ, ಬೆಳಗಾವಿ ರೈಲು ನಿಲ್ದಾಣ ಕೂಡ ಕ್ಯಾಂಟೋನ್ಮೆಂಟ್ ಕ್ಯಾಂಪ್ ಪ್ರದೇಶದಲ್ಲಿದೆ. ಎರಡೂ ಮೂರ್ತಿಗಳನ್ನು ಅಳವಡಿಸಲು ವಿವಿಧ ಸಂಘಟನೆಗಳು ನಿರಂತರ ಪ್ರತಿಭಟನೆ ನಡೆಸುತ್ತಿವೆ. ಎರಡೂ ವಿಗ್ರಹಗಳನ್ನು ರೇಲ್ವೆ ನಿಲ್ದಾಣದ ಉಗ್ರಾಣ ಕೊಠಡಿಯಲ್ಲಿ ಇರಿಸಲಾಗಿದ್ದು. ಸಮಾಜದಲ್ಲಿ ತಪ್ಪು ಸಂದೇಶಗಳು ಮತ್ತು ವದಂತಿಗಳನ್ನು ಹರಡಲಾಗುತ್ತಿದೆ ಎಂದು ತಿಳಿಸಿದರು.
ಆದ್ದರಿಂದ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಬೆಳಗಾವಿ ರೈಲು ನಿಲ್ದಾಣದಲ್ಲಿ ಛತ್ರಪತಿ ಶ್ರೀ. ಶಿವಾಜಿ ಮಹಾರಾಜರ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಮೂರ್ತಿಯನ್ನು ಕೂಡಲೇ ಅಳವಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅನಿಲ ಬೆನಕೆ ಅವರು ರೇಲ್ವೆ ರಾಜ್ಯ ಸಚಿವ ಶ್ರೀ. ವಿ. ಸೋಮಣ್ಣಾಜಿ ಅವರಿಗೆ ಮನವಿ ಮಾಡಿದರು.