ಕವಿ , ಸಾಹಿತಿ ದೀಪಕ ಬಿಳ್ಳೂರ ಅವರ ಏಳನೆಯ ಕವನ ಸಂಕಲನ “ಎತ್ತಿ ತೆಗೆದ ಮುತ್ತುಗಳು” ದಿನಾಂಕ 18.03.2026 ರಂದು ಹಂಪಿ ಇಂಟರನ್ಯಾಷಿನಲ ಹೋಟೆಲಿನಲ್ಲಿ ಲೋಕಾರ್ಪಣೆ ಆಯಿತು. ಈ ಕವನ ಸಂಕಲನವನ್ನು ಎಸ್.ಎಲ್.ಆರ್ ಮೆಟಾಲಿಕ್ಸ್ ಲಿಮಿಟೆಡ್ ಕಂಪನಿಯ ಎಂ. ಡಿ. ಯಾಗಿರುವ ಶ್ರೀ ರಾಜಕುಮಾರ ಗೋಯಲ್ ಇವರು ಲೋಕಾರ್ಪಣೆ ಮಾಡಿದರು. ಎತ್ತಿ ತೆಗೆದ ಮುತ್ತುಗಳು ಕವನ ಸಂಕಲನ ಆಧ್ಯಾತ್ಮಿಕ ಮೌಲ್ಯ ಸಂದೇಶವಿರುವ ಕನ್ನಡ ಸಾರಸ್ವತ ಲೋಕದ ಮುತ್ತಿನ ಮಾಲೆಯಾಗಿದೆ. ಇದರಲ್ಲಿ ಪ್ರಕೃತಿ ವರ್ಣನೆ, ಜೀವನದ ಸಂಭ್ರಮ, ಸುಖ-ದುಃಖ, ನೋವು ನಲಿವು, ಮಾನವ ಸಂಬಂಧಗಳು ಇತ್ಯಾದಿ ಅಂಶಗಳು ಕಾವ್ಯಾತ್ಮಕವಾಗಿ ವ್ಯಕ್ತವಾಗಿವೆ.ಈ ಕವನ ಸಂಕಲನವು ಸರಳ ಭಾಷೆಯಲ್ಲಿ ಹೊರಹೊಮ್ಮಿದ್ದು ಹೃದಯಸ್ಪರ್ಶಿ ಕಾವ್ಯಗಳ ಸಂಗ್ರಹ, ಓದುಗರಲ್ಲಿ ಚಿಂತನೆ ಮತ್ತು ಭಾವನೆಗಳನ್ನು ಜಾಗೃತಗೊಳಿಸುವ ಪ್ರಯತ್ನವಾಗಿದೆ. ಕವಿಗಳ ಆಶಯ ಮಾನವೀಯ ಮೌಲ್ಯಗಳಿಗೆ ಒತ್ತು ನೀಡುವುದು. ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುವುದು. ಮಾನವೀಯ ಸಂಬಂಧಗಳನ್ನು ಕಾಪಾಡುವುದು. ಪ್ರೀತಿ ವಿಶ್ವಾಸದಿಂದ ಮನ ಗೆಲ್ಲುವುದಾಗಿದೆ. ರಾಷ್ಟ್ರಕವಿ ಕುವೆಂಪುರಂತೆ ಕವಿಗಳ ಭಾವನೆ ವಿಶ್ವ ಶಾಂತಿಯನ್ನು ಹರಡುವ ಮಹಾ ಕಾರ್ಯವನ್ನು ಮಾಡುತ್ತದೆ .ಹಲವಾರು ಜಾತಿ ಧರ್ಮಗಳು ಭೇದ ಭಾವಗಳು ತಾಂಡವ ವಾಡುವ ಈ ಕಾಲದಲ್ಲಿ ಮಾನವ ಧರ್ಮವೇ ಶ್ರೇಷ್ಠ ಎಂದು ಸಾರುವ ಈ ಕವಿತೆಗಳು ಸರ್ವಕಾಲಿಕವಾಗಿವೆ ಎಂದು ಮಾತನಾಡಿದರು.
ಕವಿ ದೀಪಕ ಬಿಳ್ಳೂರ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಕಾವ್ಯ ಶ್ರೀಧರ ಪ್ರಶಸ್ತಿ, ಸಾಹಿತ್ಯ ಸೇವಾ ಭಾರ್ಗವ ಪ್ರಶಸ್ತಿ, ಗುರುಕುಲ ಸಾಹಿತ್ಯ ಶರಬ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ.
ಕಾರ್ಯಕ್ರಮದಲ್ಲಿ ಯೋಗೇಂದ್ರ ಚತುರ್ವೇದಿ, ರಜತ್ ಗೋಯಲ್. ರಾಜೇಶ್ ಕಾಮ್ಕರ್, ಹಾಗೂ ಎಸ್. ಎಲ್. ಆರ್. ಮೆಟಾಲಿಕ್ಸ್ ಲಿಮಿಟೆಡ್ ಕಂಪನಿಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
