ಬೆಳಗಾವಿ-20:ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸುಸಂದರ್ಭದಲ್ಲಿ ಚಿದಂಬರ ನಗರದಲ್ಲಿ ಒಂದು ವಿಶೇಷ ವೈವಿಧ್ಯಮಯ ಕಾರ್ಯಕ್ರಮವನ್ನು ನಗರವಾಸಿಗಳು ದಿನಾಂಕ.17.03.2026 ರಂದು ನಡೆಸಿದರು. ಚಿದಂಬರನಗರ 3 ನೆಯ ಕ್ರಾಸ್ ರಾಜಾರಾಮ ಮಾರ್ಗದ ಇಪ್ಪತ್ತಕ್ಕೂ ಹೆಚ್ಚು ಬೀಸಿ ( ಕಿಟ್ಟಿ ) ಸದಸ್ಯರು ಅದರಲ್ಲೂ ಮಹಿಳೆಯರೇ ಒಟ್ಟಾಗಿ ಸೇರಿ ಹಿರಿಯ ಜೀವಗಳಿಗೆ ಸನ್ಮಾನಿಸುವ ಸುಂದರ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಿದರು.
ನಗರದ ಮೂರನೇ ಓಣಿಯವರಾಗಿ ವೃತ್ತಿಯಿಂದ ನಿವೃತ್ತಿ ಹೊಂದಿರುವ ಅಧಿಕಾರಿ ವರ್ಗದವರು , ಶಿಕ್ಷಕ ವರ್ಗದವರು , ಸೇರಿದಂತೆ “ನಾಲ್ಕು ದಂಪತಿಗಳಿಗೆ 50 ರ ಸುವರ್ಣ ವಿವಾಹ ವಾರ್ಷಿಕ ಆಚರಣೆಯನ್ನು ಕೈಗೊಂಡರು.” ಅದರಂತೆ “ಎಪ್ಪತ್ತೈದು ವರ್ಷ ವಯಸ್ಸು ದಾಟಿದ ಇಬ್ಬರು ಹಿರಿಯ ಮಹಿಳೆಯರಿಗೂ “ಈ ಸುಸಂದರ್ಭದಲ್ಲಿ ಅಭಿಮಾನದಿಂದ ಸನ್ಮಾನಿಸಿದರು. ಸನ್ಮಾನಿತರೆಂದರೆ ಶ್ರೀ ಎ.ಆರ್. ಕುಲಕರ್ಣಿ ದಂಪತಿ ,ಶ್ರೀ ಜಿ.ಪಿ.ಕುಲಕರ್ಣಿ ದಂಪತಿ ಶ್ರೀ ರಾಜಾರಾಮ ಸಾಮಂತ ದಂಪತಿ, ಶ್ರೀ ಗುರುಸಿದ್ದಯ್ಯ ಮಾವಿನಕಟ್ಟೆ ದಂಪತಿ, ಹಿರಿಯರಾದ ಶ್ರೀಮತಿ ಮೀರಾ ನಾಡಕರ್ಣಿ , ಶ್ರೀಮತಿ ಸುಧಾ ಮಹಾಜನ.
ಸನ್ಮಾನಿತರಾದ ಈ ಹಿರಿಯ ದಂಪತಿಗಳು ತಮ್ಮ ವೈವಾಹಿಕ ಜೀವನವನ್ನು ಮನೆ, ಮಕ್ಕಳು ,ಕುಟುಂಬ ,ಎಲ್ಲದರ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಐವತ್ತರಿಂದ ಐವತ್ತೈದು ವರ್ಷಗಳಕಾಲ ನಿರ್ವಹಿಸಿ ಆದರ್ಶ ದಂಪತಿಗಳಾಗಿ ಗುರುತಿಸಿಕೊಳ್ಳುವುದರಲ್ಲಿ ತಪಸ್ಸಿನಷ್ಟೇ ಶ್ರಮ ವಹಿಸಿ ಮಕ್ಕಳು ಮೊಮ್ಮಕ್ಕಳನ್ನು ಕಂಡು ಜೀವನವನ್ನು ಗೆದ್ದು ತೋರಿಸಿದವರಾಗಿದ್ದಾರೆ. ಇಂತಹ ಹಿರಿಯರುಗಳಿಗೆ ಸನ್ಮಾನಿಸಿ ಅವರುಗಳ ” ಸುವರ್ಣ ವಿವಾಹ ವಾರ್ಷಿಕ ದಿನಾಚರಣೆ ಕಾರ್ಯಕ್ರಮ ನಡೆಸಿ ” ಸಂಭ್ರಮಿಸುವ ಸೌಭಾಗ್ಯ ದೊರಕಿದ್ದು ಈ ನಗರ ವಾಸಿಗಳ ಪುಣ್ಯವಲ್ಲವೇ? ಸನ್ಮಾನ ಪಡೆದ ಹಿರಿಯ ಜೀವಗಳು ಈ ಸುಸಂದರ್ಭದಲ್ಲಿ ಅತಿಯಾಗಿ ಭಾವುಕರಾಗಿ ಕಣ್ಣಂಚನ್ನು ಒದ್ದೆ ಮಾಡಿಕೊಂಡರು. ಇದು ಮರೆಯದಿರುವ ರಿಟರ್ನ್ ಗಿಪ್ಟ ಎಂಬುದು ಅಷ್ಟೇ ಸತ್ಯ ತಾನೆ…ಇಂತಹ ಸಂತೋಷದ ಭಾಗ್ಯ ಯಾರಿಗುಂಟು? ಯಾರಿಗಿಲ್ಲ?
