23/12/2024
IMG-20240622-WA0014

ಅಥಣಿ-೨೨: ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಜಯಗಳಿಸಿ ಮೊದಲ ಬಾರಿಗೆ ಅಥಣಿಗೆ ಭೇಟಿ ನೀಡಿದ ಸಂಸದೆ ಪ್ರಿಯಂಕಾ ಜಾರಕಿಹೊಳಿಯವರು ನಗರದಲ್ಲಿರುವ ಜಗಜ್ಯೋತಿ ಬಸವೇಶ್ವರ, ಡಾ. ಬಿ.ಆರ್.‌ ಅಂಬೇಡ್ಕರ್‌, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಮಹರ್ಷಿ ವಾಲ್ಮೀಕಿ, ಶಿವಾಜಿ ಮಹಾರಾಜ, ಟಿಪ್ಪು ಸುಲ್ತಾನ್‌ ಪ್ರತಿಮೆಗಳಿಗೆ ಪುಷ್ಪಾರ್ಚನೆ ಸಲ್ಲಿಸಿದರು.

ನಂತರ ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿ‌ ನೀಡಿ ಸಿದ್ದೇಶ್ವರ ದೇವರ ದರ್ಶನ ಪಡೆದು, ಮೋಟಗಿ ಮಠ, ಗಚ್ಚಿನ ಮಠಕ್ಕೆ ಭೇಟಿ ನೀಡಿ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ ಅವರನ್ನು ಸತ್ಕರಿಸಿ, ಆಶೀರ್ವಾದ ಪಡೆದರು.

ಇದೇ ವೇಳೆ ಮೋಟಗಿ ಮಠಕ್ಕೆ ಭೇಟಿ ನೀಡಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರನ್ನು ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಸನ್ಮಾನಿಸಿ, ರಾಜಕೀಯವಾಗಿ ಬೆಳೆದು ತಂದೆ, ಸಚಿವ ಸತೀಶ್‌ ಜಾರಕಿಹೊಳಿ ಅವರಂತೆಯೇ ಜನ ಸೇವೆ ಮಾಡಿ ಎಂದು ಹಾರೈಸಿದರು.

ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಜಯಗಳಿಸಿ ಮೊದಲ ಬಾರಿಗೆ ಅಥಣಿಗೆ ಭೇಟಿ ನೀಡಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರನ್ನು ಕಾಂಗ್ರೆಸ್‌ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಅಥಣಿ ತಾಲೂಕಿನ ಎಲ್ಲಾ ಹಳ್ಳಿಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಕಾರ್ಯಕರ್ತರು, ಮುಖಂಡರು ನೂತನ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರನ್ನು ಸತ್ಕರಿಸಿ, ಅಭಿನಂದಿಸಿರು.

ವಕೀಲರ ಸಂಘದಿಂದ ಸತ್ಕಾರ: ನಗರದ ಪ್ರವಾಸಿ ಮಂದಿರದಲ್ಲಿ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರನ್ನು ಅಥಣಿ ವಕೀಲರ ಸಂಘದಿಂದ ಸತ್ಕಾರಿಸಲಾಯಿತು. ಅಥಣಿ ವಕೀಲರ ಸಂಘದ ಅಧ್ಯಕ್ಷ ಎ.ಎಸ್.‌ ಹುಚ್ಚಗೌಡರ, ಉಪಾಧ್ಯಕ್ಷ ಎಂ.ಸಿ. ದುಂಡಿ, ಕಾರ್ಯದರ್ಶಿ ಮಿತೇಶ್‌ ಪಟ್ಟಣ, ಇನ್ನೋರ್ವ ಕಾರ್ಯದರ್ಶಿ ಶಾರದಾ ಕೊಟ್ಟುರಮಟ್ಟ, ಹಿರಿಯ ವಕೀಲರಾದ ಸುನೀಲ್‌ ಸಂಕ, ಕೆ.ಎ. ವನಜೋಳ ಸೇರಿದಂತೆ ವಕೀಲರ ಸಂಘದ ಹಲವು ಸದಸ್ಯರು ಇದ್ದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರಾದ ಸದಾಶಿವ ಬೂಟಾಳೆ, ಗಜಾನನ ಮಂಗಸೂಳಿ, ರಮೇಶ ಸಿಂದಗಿ, ರಾವಸಾಬ್‌ ಐಹೊಳೆ, ಬಸವರಾಜ ಬೂಟಾಳೆ, ದಿಗ್ವಿಜಯ ಪವಾರ ದೇಸಾಯಿ, ಸಿದ್ದಾರ್ಥ ಸಿಂಗೆ, ಮಯೂರ ಸಿಂಗೆ ಸೇರಿದಂತೆ ನೂರಾರು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

error: Content is protected !!