ಬೆಳಗಾವಿ-೨೨: ಬೆಳಗಾವಿಯ ಗಣೇಶಪುರದಲ್ಲಿ ಹೆತ್ತ ಮಕ್ಕಳನ್ನು ಬಿಟ್ಟು ತಾಯಿ ಪ್ರಿಯಕರನ ಜೊತೆಗೆ ಓಡಿ ಹೋದ ಪ್ರಕರಣ ದೊಡ್ಡ ಸಂಚಲನ ಮೂಡಿಸಿತ್ತು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಮಾಧ್ಯಮಗಳಲ್ಲಿ ಬಿಜೆಪಿ ಮುಖಂಡೆ, ನ್ಯಾಯವಾದಿ ಮಾಲತಿ ಸೆಕ್ಸೆನಾ ಅವರ ಫೋಟೊ ಕೂಡ ಬಿತ್ತರವಾಗಿತ್ತು. ಆದರೆ ಈ ಪ್ರಕರಣಕ್ಕೂ ಮಾಲತಿ ಸೆಕ್ಸೆನಾಗೂ ಯಾವುದೇ ಸಂಬಂಧವಿಲ್ಲ.
ಅಚಾತುರ್ಯದಿಂದ ಮಾಲತಿ ಸೆಕ್ಸೆನಾ ಫೋಟೊ ಕೆಲ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಲತಿ ಸೆಕ್ಸೆನಾ, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆದರೆ ಆ ಯುವಕ ನಮ್ಮ ತಂಡದಲ್ಲಿದ್ದು ಕೆಲಸ ಮಾಡುತ್ತಿದ್ದ. ಯುವಕನ ಜೊತೆಗೆ ನಾನು ತೆಗೆಸಿಕೊಂಡ ಫೋಟೊ ಈಗ ಸಾಮಾಜಿಕ ಜಾಲತಾಣಗಳಲ್ಲಿ, ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ವಾರವಷ್ಟೇ ತಾಯಿಗಾಗಿ ಮೂವರು ಮಕ್ಕಳು ಕ್ಯಾಂಪ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.