ಬೆಳಗಾವಿ-೦೯: ಜೈನ ಧರ್ಮಿಯರ ಅತ್ಯಂತ ಶೃದ್ದಾ ಕೇಂದ್ರವಾದ ಚಿಕ್ಕೋಡಿ ತಾಲೂಕಿನ ಕೋಥಳಿ ಶಾಂತಿಗಿರಿ ಶ್ರೀಕ್ಷೇತ್ರಕ್ಕೆ ಜಿತೋ ಸದಸ್ಯರ ವತಿಯಿಂದ ಶುದ್ದ ಕುಡಿಯುವ ನೀರನ ಘಟಕವನ್ನು ಕೊಡುಗೆ ನೀಡಲಾಯಿತು.
ಶುಕ್ರವಾರ ಜು. 7 ರಂದು ಕೋಥಳಿ ಶಾಂತಿಗಿರಿ ಕ್ಷೇತ್ರದಲ್ಲಿ ಆಚಾರ್ಯರತ್ನ ದೇಶಭೂಷಣ ಮಹಾರಾಜರ 37 ನೇ ಪುಣ್ಯತಿಥಿ , ಆಚಾರ್ಯ ವರದತ್ತಸಾಗರ ಮಹಾರಾಜರ 18 ಪುಣ್ಯತಿಥಿ ಹಾಗೂ ಆಚಾರ್ಯ ವಿದ್ಯಾನಂದಜೀ ಮಹಾರಾಜರ 100 ನೇ ಜನ್ಮ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿನಯಾಂಜಲಿ ಕಾರ್ಯಕ್ರಮ ಮತ್ತು ಶಾಂತಿಗಿರಿ ಕ್ಷೇತ್ರದ ಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಈ ನೀರಿನ ಘಟಕದ ಉದ್ಘಾಟನಾ ಸಮಾರಂಭ ನಡೆಯಿತು.
ಜಿತೋ ಸದಸ್ಯರಾದ ಅಭಿಜೀತ ಅಂಕಲೆ, ಗೋಪಾಲ ಜಿನಗೌಡ, ವಿಕ್ರಮ ಅಮಿಚಂದ ಜೈನ, ಹರ್ಷವರ್ಧನ ಅನಿಲ ಇಂಚಲ, ಪ್ರಮೋದ ಎಂ.ಪಾಟೀಲ,ಶೀಲ ಮಿರ್ಜಿ, ಸುಹಾಸ ಚಾರುಕೀರ್ತಿ ಸೈಬನ್ನವರ, ಕುಂತಿನಾಥ ಕಲಮನಿ, ಅಭಯ ಆದಿಮನಿ, ವಿಜಯ ಪಾಟೀಲ,ರಾಹುಲ ಹಜಾರೆ, ಸಂಜೀವ ರತ್ನಾಕರ ದೊಡ್ಡಣ್ಣವರ, ಮನೋಜ ಸಂಚೇತಿ, ನಿತೀನ ಚಿಪ್ರೆ , ಸುನಿಲ ಮಾಣಿಕ ಬಸ್ತವಾಡ ಇವರು ದೇಣಿಗೆ ನೀಡಿ ಶುದ್ದ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಶಾಂತಿಗಿರಿ ಟ್ರಸ್ಟ ಚೇರಮನ್ ಪಿ.ಆರ್. ಪಾಟೀಲ, ಸೆಕ್ರೆಟರಿ ಪಾಸಗೊಂಡ ಪಾಟೀಲ ಬೇಡಕಿಹಾಳ, ಪೋಪಟ ಖೋತ, ಕಿರಣ ಪಾಟೀಲ, ತಾತ್ಯಾಸಾಹೇಬ ಪಾಟೀಲ ಬೋಜ, ಡಾ. ಪದ್ಮರಾಜ ಪಾಟೀಲ, ಎಸ್.ಟಿ.ಮುನ್ನೊಳ್ಳಿ, ಬಾಹುಬಲಿ ನಸಲಾಪೂರೆ, ಪ್ರಕಾಶ ಕೂಟ , ಮನೋಹರ ದೊಡ್ಡಣ್ಣವರ ಸೇರಿದಂತೆ ಮೊದಲಾದವರು ಹಾಜರಿದ್ದರು.