ಬೆಳಗಾವಿ-೦೯: ಕರ್ಲೆ ಬೆಳಗುಂದಿ ರಸ್ತೆಯಲ್ಲಿ ರುವ ಸ್ಮಶಾನದ ಬಳಿ ಹೋಗುವಾಗ ಬೈಕ್ ಮೇಲೆ ಮರ ಬಿದ್ದು ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂದೆ ಕುಳಿತಿದ್ದ ಇಬ್ಬರು ಗಾಯಗೊಂಡಿದ್ದಾರೆ. ಭಾನುವಾರ (9) ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ಯುವಕನ ಹೆಸರು ಸೋಮನಾಥ ರಾಹುಲ ಮುಚ್ಚಂಡಿಕರ್ (ವಯಸ್ಸು 20, ಕರ್ಲೆ ನಿವಾಸಿ).
ಈ ಬಗ್ಗೆ ಮಾಹಿತಿ ಏನೆಂದರೆ ಸೋಮನಾಥ ಮತ್ತು ಆತನ ಇಬ್ಬರು ಸ್ನೇಹಿತರು ಕೆಲಸದ ನಿಮಿತ್ತ ಕಾರ್ಲೆಯಿಂದ ಬೆಳಗುಂದಿಗೆ ಹೋಗುತ್ತಿದ್ದರು. ಬೆಳಗುಂದಿ ಸ್ಮಶಾನದ ಬಳಿ ಎರಡು ಬದಿಗಳಲ್ಲಿ ಮರಗಳಿವೆ. ಈ ಪೈಕಿ ಒಂದು ಮರವು ಬೈಕ್ ನಲ್ಲಿ ಹೋಗುತ್ತಿದ್ದ ಸೋಮನಾಥ್ ಮೇಲೆ ಬಿದ್ದಿದೆ. ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟರೆ, ಹಿಂದೆ ಕುಳಿತಿದ್ದ ಸ್ವಪ್ನಿಲ್ ಸುನೀಲ್ ದೇಸಾಯಿ (21) ಮತ್ತು ವಿಠ್ಠಲ್ ಕೃಷ್ಣ ತಳವಾರ (20 ವರ್ಷ) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.