ಬೆಳಗಾವಿ-೦೮: ಹೆಮ್ಮೆ: ತುರ್ತು ದುರಸ್ತಿ ಕಾರ್ಯದ ಕಾರಣ ಬೆಳಗಾವಿ ನಗರದಲ್ಲಿ 2024ರ ಜೂನ್ 9 ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.
ಟಿಳಕವಾಡಿ, ಹಿಂದವಾಡಿ, ಜಕ್ಕೀರಹೊಂಡ, ಸ್ವಾಮಿ ವಿವೇಕಾನಂದ ಕಾಲೋನಿ, ಪಾಟೀಲ್ ಗಲ್ಲಿ, ಶಹರ್, ಕಂಟೋನ್ಮೆಂಟ್, ಮಾರುತಿ ಗಲ್ಲಿ, ನಾನಾವಾಡಿ, ಶಹಾಪುರ ಮತ್ತು ಕಪಲೇಶ್ವರದ ಫೀಡರ್‌ಗಳೊಂದಿಗೆ ವಡಗಾಂವ್‌ನ ಎಲ್ಲಾ ಫೀಡರ್‌ಗಳಿಗೆ ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ನಾಗರಿಕರು ಇದನ್ನು ಗಮನಿಸಿ ಸಹಕರಿಸಬೇಕು ಎಂದು ಹೆಸ್ಕಾಂ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.
ನಗರದ ದಕ್ಷಿಣ ಭಾಗದಲ್ಲಿ ಭಾನುವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.