ಬೆಳಗಾವಿ-೦೭: ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಝೇಶನ ಜಿತೋ ಯುವ ಘಟಕದ ವತಿಯಿಂದ ಜೈನ ಸಮಾಜದಲ್ಲಿನ ಆರ್ಥಿಕವಾಗಿ ಹಿಂದುಳಿದ 108 ಜನರಿಗೆ ಉಚಿತವಾಗಿ ಸಮ್ಮೇದ ಶೀಖರಜಿ ತೀರ್ಥಕ್ಷೇತ್ರದ ದರ್ಶನ ಭಾಗ್ಯವನ್ನು ಒದಗಿಸಿಕೊಟ್ಟಿದ್ದಾರೆ.
ಜಿತೋ ಯುವ ಘಟಕದ ವತಿಯಿಂದ ಪ್ರಥಮ ಬಾರಿಗೆ ಬೆಳಗಾವಿಯಲ್ಲಿ ಇಂಥದೊಂದು ಕ್ಷೇತ್ರ ದರ್ಶನದ ಯೋಜನೆಯನ್ನು ಹಾಕಿಕೊಂಡು ಸಮಾಜ ಬಾಂಧವರಿಗೆ ಉಚಿತ ತೀರ್ಥಕ್ಷೇತ್ರದ ದರ್ಶನದ ಭಾಗ್ಯವನ್ನು ಕಲ್ಪಿಸಿಕೊಡಲಾಗಿದೆ.
ಜೈನ ಧರ್ಮದಲ್ಲಿ ಸಮ್ಮೇದ ಶಿಖರಜಿ ಈ ಕ್ಷೇತ್ರ ಅತ್ಯಂತ ಪವಿತ್ರ ಕ್ಷೇತ್ರವಾಗಿದ್ದು, ಪ್ರತಿಯೊಬ್ಬ ಜೈನರು ಈ ಕ್ಷೇತ್ರದ ದರ್ಶನ ಪಡೆಯಬೇಕೆಂಬ ಬಯಕೆಯಾಗಿರುತ್ತದೆ. ಆದರೆ ಆರ್ಥಿಕವಾಗಿ ಸಬಲವಾಗಿರದ ಕಾರಣ ಎಷ್ಟೋ ಜನರಿಗೆ ಈ ಕ್ಷೇತ್ರದ ದರ್ಶನ ಪಡೆಯುವ ಭಾಗ್ಯ ಒದಗುವುದಿಲ್ಲ. ಈ ಅಂಶವನ್ನು ಮನಗೊಂಡ ಜಿತೋ ಯುವ ಘಟಕದ ವತಿಯಿಂದ ಸಮಾಜದಲ್ಲಿನ ದಾನಿಗಳಿಂದ ಹಣವನ್ನು ಕ್ರೋಡಿಕರಿಸಿ ಒಟ್ಟು 108 ಜನರಿಗೆ ಶ್ರೀಕ್ಷೇತ್ರದ ದರ್ಶನ ಭಾಗ್ಯವನ್ನು ಒದಗಿಸಿಕೊಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿನ ಜೈನ ಸಮಾಜದ ಆರ್ಥಿಕವಾಗಿ ಹಿಂದುಳಿದ 108 ಜನರನ್ನು ಜೂನ 6 ರಂದು ಬೆಳಗಾವಿಯ ರೈಲು ನಿಲ್ದಾಣದಲ್ಲಿ ಶುಭಹಾರೈಸಿ ಅವರಿಗೆ ಬಿಳ್ಕೋಡಲಾಯಿತು.
ಈ ಬಿಳ್ಕೋಡುಗೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ ಅವರು ಯಾತ್ರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಯಾತ್ರಾರ್ಥಿಗಳು ತಮ್ಮ ಯಾತ್ರೆಯ ಸಮಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಇರಬೇಕು. ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೊಂದಬೇಕು. ಆಯೋಜಕರು ಸೂಚಿಸಿದ ನಿಯಮಗಳನ್ನು ಪಾಲಿಸಿಕೊಂಡು ಹೋಗಬೇಕೆಂದು ಹೇಳಿದ ಅವರು, ಜಿತೊ ಯುವ ಘಟಕದ ವತಿಯಿಂದ ಇದೊಂದು ಅತ್ಯುತ್ತಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು. ಈ ತರಹದ ಸಮಾಜ ಸೇವೆ ಇನ್ನಷ್ಟು ಮುಂದುವರೆಯಲಿ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿತೋ ಯುವ ಘಟಕದ ಅಧ್ಯಕ್ಷ ದೀಪಕ ಸುಬೇದಾರ, ಕಾರ್ಯದರ್ಶಿ ವೈಭವ ಮೆಹತಾ, ಯಾತ್ರಾ ಕಾರ್ಯಕ್ರಮ ಸಂಯೋಜಕ ಅಂಕಿತ ಸಂಚೇತಿ, ಅಂಕಿತ ಖೊಡಾ, ಜಿತೋ ಅಧ್ಯಕ್ಷ ವೀರಧವಲ ಉಪಾಧ್ಯೆ, ಕಾರ್ಯದರ್ಶಿ ಅಶೋಕ ಕಟಾರಿಯಾ, ಮಹಿಳಾ ಘಟಕದ ಅಧ್ಯಕ್ಷೆ ಮಾಯಾ ಜೈನ, ಪುಷ್ಪಕ ಹನಮಣ್ಣವರ, ಸತೀಶ ಮೆಹತಾ, ಅಶೋಕ ದಾನವಾಡೆ, ಕುಂತಿನಾಥ ಕಲಮನಿ, ಸುನಿಲ ಬಸ್ತವಾಡ, ರಾಹುಲ ಹಜಾರೆ, ಹರ್ಷವಧನ ಇಂಚಲ, ಡಾ.ದೇವೆಗೌಡ, ಅಭಯ ಆದಿಮನಿ, ಯಾತ್ರೆ ಸಂಯೋಜಕ ಕಿರಣ ಕಲಕುಪ್ಪಿ ಸೇರಿದಂತೆ ಮೊದಲಾದವರು ಹಾಜರಿದ್ದರು.