ಬೆಳಗಾವಿ-೦೧:ತಂಬಾಕು ಸೇವನೆ ಜೀವನವನ್ನು ನಾಶಮಾಡುತ್ತದೆ. ತಂಬಾಕು ಸೇವನೆಯಿಂದ ದೂರವಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಲಿಂಗರಾಜ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ಹೇಳಿದರು. ಅವರು ಲಿಂಗರಾಜ ಕಾಲೇಜಿನ ಎನ್‍ಸಿಸಿ, ಎನ್‍ಎಸ್‍ಎಸ್, ರೆಡ್‍ಕ್ರಾಸ್ ಮತ್ತು ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯ, ಹಾಗೂ ಮಿಲ್ಟ್ರಿ ದಂತ ವೈದ್ಯಕೀಯ ಆಸ್ಪತ್ರೆಗಳ ಆಶ್ರಯದಲ್ಲಿ ವಿಶ್ವ ತಂಬಾಕು ನಿಷೇದ ದಿನದ ಅಂಗವಾಗಿ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ತಂಬಾಕು ಸೇವನೆಯಿಂದ ಲಕ್ಷಾಂತರ ಯುವಜನಾಂಗ ಹದಿಹರೆಯದಲ್ಲಿಯೇ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಜೀವವನ್ನು ಬಿಡುವಂತಾಗಿದೆ. ತಂಬಾಕಿನ ದುಶ್ಚಟಕ್ಕೆ ಒಳಗಾಗದೆ ಇರುವುದು ಅದು ಬಹುಮುಖ್ಯ ಸಂಗತಿ. ಇಂದು ವಿಶ್ವ ಆರೋಗ್ಯ ಸಂಸ್ಥೆಯು ಕೂಡ ತಂಬಾಕಿನ ಎಲ್ಲ ಉತ್ಪನ್ನಗಳನ್ನು ನಿಷೇದಿಸಿದೆ. ನಮ್ಮ ಆರೋಗ್ಯ ಕುಟುಂಬದ ಆರೋಗ್ಯದೆಡೆಗೆ ನಾವು ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯವೆಂದು ಹೇಳಿದರು. ಈ ಸಂದರ್ಭದಲ್ಲಿ ತಂಬಾಕು ನಿಷೇದ ಹಾಗೂ ಜನಜಾಗೃತಿ ಹೊತ್ತ ಫಲಕಗಳನ್ನು ಹಿಡಿದು ಲಿಂಗರಾಜ ಕಾಲೇಜು ರಸ್ತೆಯಲ್ಲಿ ಎನ್‍ಸಿಸಿ ಕೆಡೆಟ್ ಹಾಗೂ ವಿದ್ಯಾರ್ಥಿಗಳು ಪಥ ಸಂಚಲನ ಮಾಡಿದರು.
ಎನ್‍ಸಿಸಿ ಕ್ಯಾಫ್ಟನ್ ಡಾ.ಮಹೇಶ ಗುರನಗೌಡರ, ಪಿಯು ಪ್ರಾಚಾರ್ಯೆ ಗಿರಿಜಾ ಹಿರೇಮಠ, ದೈಹಿಕ ನಿರ್ದೇಶಕರಾದ ಡಾ.ಸಿ.ರಾಮರಾವ್, ಡಾ.ರೀಚಾ ರಾವ್, ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ.ಸವಿತಾ ಪಟ್ಟಣಶೆಟ್ಟಿ, ಡಾ.ಎಚ್.ಎಂ. ಚೆನ್ನಪ್ಪಗೋಳ, ಎನ್‍ಎಸ್‍ಎಸ್ ಅಧಿಕಾರಿ ಡಾ.ಶಶಿಕಾಂತ ಕೊಣ್ಣೂರ, ರೆಡ್ ಕ್ರಾಸ್ ಅಧಿಕಾರಿ ಪ್ರೊ ಸುನಿತ ಮೂಡಲಗಿ, ಡಾ.ರಾಘವೇಂದ್ರ ಹಾಜಗೋಳಕರ್ ಮೊದಲಾದವರು ಹಾಜರಿದ್ದರು.