23/12/2024

ಬೆಳಗಾವಿ-03:ದೇಶವೆ ರಾಮಮಂದಿರ ಉದ್ಘಾಟನೆಯ ಅಮೃತಘಳಿಗೆಗಾಗಿ ಎದುರು ನೋಡುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ 3ದಶಕಗಳ ಹಿಂದಿನ ರಾಮಜನ್ಮಭೂಮಿ ಹೊರಾಟಗಾರರ ಹಿಂದೂ ಕಾರ್ಯಕರ್ತರ ಪ್ರಕರಣ ಹೆಕ್ಕಿ ಸಮಾಜದಲ್ಲಿ ಕೊಮುಗಲಬೆಗೆ ಪ್ರಚೋದನೆ ಮಾಡುತ್ತಿರುವ ಸನ್ಮಾನ್ಯ ಸಿದ್ದರಾಮಯ್ಯನವರ ಸರ್ಕಾರಕ್ಕೆ ಎಲ್ಲ‌ಪ್ರಕರಣಗಳನ್ನು ಹಿಂಪಡೆಯಲು ನಿರ್ದೇಶನ ನೀಡುವಂತೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.

5ನೂರು ವರ್ಷಗಳ ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣ ಇತ್ಯಾರ್ಥವಾಗಿ, ದೇಶವೆ ರಾಮಮಂದಿರ ಉದ್ಘಾಟನೆಯ ಅಮೃತಘಳಿಗೆಗಾಗಿ ಎದುರು ನೋಡುತ್ತಿರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರ 3ದಶಕಗಳ ಹಿಂದಿನ ರಾಮಜನ್ಮಭೂಮಿ ಹೊರಾಟಗಾರರ ಹಿಂದೂ ಕಾರ್ಯಕರ್ತರ ಪ್ರಕರಣಗಳನ್ನು ಹೆಕ್ಕಿ ಸಮಾಜದಲ್ಲಿ ಕೊಮುಗಲಭೆಗೆ ಪ್ರಚೋದನೆ ಮಾಡುತ್ತಿರುವ ಸನ್ಮಾನ್ಯ ಸಿದ್ದರಾಮಯ್ಯನವರ ಸರ್ಕಾರದ ಕ್ರಮ ಖಂಡನೀಯ. ರಾಜ್ಯದಲ್ಲಿ ಗಂಭೀರ ಸ್ವರೂಪದ ಡಿಜೆಹಳ್ಳಿ, ಕೆಜೆ ಹಳ್ಳಿ ಪ್ರಕರಣದಲ್ಲಿ ಪೋಲಿಸ್ ಠಾಣೆಗೆ ನುಗ್ಗಿ, ಶಾಸಕರ‌ಮನೆಗೆ ಬೆಂಕಿ ಇಟ್ಟವರು ಅಮಾಯಕರು ಎಂತ ಹೇಳಿ ಪ್ರಕರಣ ಹಿಂಪಡೆಯುವ ನೀಚ ಬುದ್ದಿಯ ಈ ಸರ್ಕಾರಕ್ಕೆ ತಾವುಗಳು ನಿರ್ದೇಶನ ನೀಡಿ ಹಿಂದೂ ಕಾರ್ಯಕರ್ತರ ಎಲ್ಲ ಪ್ರಕರಣಗಳನ್ನ ಹಿಂಪಡೆಯುವಂತೆ ಮಾರ್ಗದರ್ಶನ ಮಾಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೆವೆ.
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಶ್ರೀರಾಮ ಮಂದಿರ ನಿರ್ಮಾಣದ ಬಗ್ಗೆ ಅಸಂತುಷ್ಟರಾಗಿರುವ ಕಾಂಗ್ರೆಸ್ ನಾಯಕರ ಮನಸ್ಥಿತಿ ನೋಡಿದರೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಂಪೂರ್ಣವಾಗಿ ನಿಷ್ಕ್ರೀಯವಾಗಿದ್ದು ತಮ್ಮ ಸರ್ಕಾರದ ವಿಫಲತೆಗಳನ್ನು ಮುಚ್ಚಿಕೊಳ್ಳಲು ಇಂತಹ ದುಸ್ಸಾಹಸಕ್ಕೆ ಕೈ ಹಾಕುತ್ತಿದೆ. ಅಲ್ಪಸಂಖ್ಯಾತರನ್ನ ಹಾಗೂ ತಮ್ಮ ಹೈ ಕಮಾಂಡ್ ಮೆಚ್ಚಿಸಲು ಕರಸೇವಕರ ಮೇಲೆನ ಮೊಕದ್ದಮೆಗಳನ್ನು ಮೂನ್ನೆಲೆಗೆ ತಂದು ಭಡಾಯಕೊಚ್ಚಿಕೊಳ್ಳುತ್ತಿರುವ ಸರ್ಕಾರಕ್ಕೆ ನಿರ್ದೇಶನ ನೀಡಿ ರಾಜ್ಯದಲ್ಲಿ ಸೌಹಾರ್ದತೆ ಕಾಪಾಡಬೇಕು.
ರಾಮ ಜನ್ಮ ಭೂಮಿಯ ವಿವಾದವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನೀಸಿದ್ದ ಮುಸ್ಲಿಂ ನಾಯಕರೆ ಮೋದಿಯವರನ್ನ ಸ್ವಾಗತಿಸಿ ರಾಮ ಮಂದಿರ ಉದ್ಘಾಟನೆಗೆ ಪಾಲ್ಗೊಳ್ಳಲು ತುದಿಗಾಲಿನಲ್ಲಿ ನಿಂತಾಗ ರಾಜ್ಯ ಸರ್ಕಾರದ ಕಾರ್ಯ ಜನರಲ್ಲಿ ಹೆಸಿತನ‌ ಮೂಡಿಸಿದೆ.
ಕಾಂಗ್ರೆಸ್ ಸರ್ಕಾರದ ಈ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಇಂತಹ ಘಟನೆ ಮತ್ತೊಮ್ಮೆ ರಾಜ್ಯದಲ್ಲಿ ಘಟಿಸಬಾರದು. ರಾಮ ಮಂದಿರ ಉದ್ಘಾಟನೆಯ ಈ ಐತಿಹಾಸಿಕ ಕ್ಷಣಗಳಿಗೆ ಯಾವುದೆ ಅಡ್ಡಿಯಾಗದಂತರಹ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಆದರಣಿಯವಾಗಿ ವಿನಂತಿಸುತ್ತೆವೆ. ಇಂತಹ ಪ್ರಚೋಧನಕಾರಿ ಕ್ರಮ ಕೈಗೊಳ್ಳುವ ಸಚಿವರ
ಹೆಡಮುರಿಯನ್ನು ಕಟ್ಟಬೇಕೆಂದು ತಮ್ಮಲ್ಲಿ ವಿನಂತಿಸುತ್ತೆವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸದೆ ಮಂಗಳಾ ಅಂಗಡಿ,ಮುರಗೇಂದ್ರಗೌಡಾ ಪಾಟೀಲ್,ಸಿದ್ದನಗೌಡ ಪಾಟೀಲ, ಸೊನಾಲಿ ಸರನೋಬಾತ,ಲೀನಾ ಟೋಪ್ಪಣವರ,ಶರತ ಪಾಟೀಲ, ಮಹಾಂತೇಶ ವಕ್ಕುಂದ,ನಿತಿನ್ ಇ ನ್ನು ಅನೇಕರು ಉಪಸ್ಥಿತಿರಿದ್ದರು.

error: Content is protected !!