ಬೆಳಗಾವಿ-೩೦: ಹಿರೇಬಾಗೇವಾಡಿ ಗ್ರಾಮದ ಶ್ರೀ ಸಾಯಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಮಂಡಲ ಪೂಜಾ ಹಾಗೂ ಆರತಿ ಪೂಜಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾಗವಹಿಸಿ, ಸಾಯಿಬಾಬಾರ ದರ್ಶನ ಆಶೀರ್ವಾದ ಪಡೆದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅರಳಿಕಟ್ಟಿಯ ತೋಂಟದಾರ್ಯ ವಿರಕ್ತಮಠದ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳು ಹಾಗೂ ಹಿರೇಬಾಗೇವಾಡಿಯ ಶ್ರೀ ಜಾಲಿಕರೆಮ್ಮ ದೇವಿಯ ಆರಾಧಕರಾದ ಉಳವಪ್ಪ ಅಜ್ಜನವರು ವಹಿಸಿದ್ದರು.
ಇದೇ ಸಮಯದಲ್ಲಿ ಅನೇಕ ಸಾಯಿ ಭಕ್ತರನ್ನು ಚನ್ನರಾಜ ಹಟ್ಟಿಹೊಳಿ ಸನ್ಮಾನಿಸಿ, ಗೌರವಿಸಿದರು.
ಕಾರ್ಯಕ್ರಮದಲ್ಲಿ ಎಫ್ ಎಸ್. ಪಾಟೀಲ, ಸಿ ಸಿ ಪಾಟೀಲ, ಪ್ರಕಾಶ ಜಪ್ತಿ, ಅನಿಲ ಪಾಟೀಲ, ಸುರೇಶ ಇಟಗಿ, ಸ್ಮಿತಾ ರಾಜಶೇಖರ್ ಪಾಟೀಲ, ಶ್ರೀಕಾಂತ ಮಾಧು ಭರಮಣ್ಣವರ, ಪಡಿಗೌಡ ಪಾಟೀಲ, ಶಿವಾನಂದ ಹಿತ್ತಲಮನಿ, ಮಂಜುನಾಥ ಕುಂಬಾರ, ಶಶಿಧರ್ ರೊಟ್ಟಿ ಹಾಗೂ ಶ್ರೀ ಸಾಯಿ ಸೇವಾ ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.