23/12/2024
IMG-20240530-WA0004

ಬೆಳಗಾವಿ-೩೦:ಮಹಿಳೆಯರು ಮೂಳೆ ಆರೋಗ್ಯ ಸುಸ್ಥಿತಿ ಇಟ್ಟಕೊಳ್ಳುವುದು, ಅಸ್ಥಿರಂಧ್ರತೆಯಂತಹ( Osteoporosis)ರೋಗ ದೂರ ಇಡಲು ಸಹಕಾರಿ ಎಂದು ನಗರದ ಶ್ರೀ ಆರ್ಥೋ ನಿರ್ದೇಶಕ ಹಾಗೂ ಶಸ್ತ್ರಚಿಕಿತ್ಸಕ ಡಾ. ಐ. ದೇವಗೌಡ ತಿಳಿಸಿದ್ದಾರೆ.

ನಗರದ ಎಂಎಲ್ ಐ ಆರ್ ಸಿ ಜೆಎಲ್ ವಿಂಗ್ ನಲ್ಲಿ ಬುಧವಾರ ನಡೆದ ಕ್ರೀಡಾ ಗಾಯಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗಳು ಕುರಿತಾದ ಕಾರ್ಯಕ್ರಮದಲ್ಲಿ ಸೈನ್ಯಾಧಿಕಾರಿಗಳ ಕುಟುಂಬ ಉದ್ದೇಶಿಸಿ ಮಾತನಾಡಿದರು.
ಮಹಿಳೆಯರು ಮುಟ್ಟು ನಿಲ್ಲುವ(Menopause) ಕಾಲದಲ್ಲಿ ಹಾರ್ಮೋನ್ ಅಸಮತೋಲನದಿಂದ‌ ಅಸ್ಥಿರಂದ್ರತೆ ಸೇರಿ ಹಲವಾರು ಇತರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ನಡುವಯಸ್ಸಿನ ಮಹಿಳೆಯರು ಹಾರ್ಮೋನ್ ಅಸಮತೋಲನ ಸಮಯದಲ್ಲಿ ಅಸಹನೀಯ ನೋವು ಅನುಭವಿಸುತ್ತಾರೆ. ಇದು ಮುಂದೆ ಅಸ್ಥಿರಂಧ್ರತೆಯಂತ ಗಂಭೀರ ರೋಗಕ್ಕೆ‌ ತುತ್ತಾಗಲು ಕಾರಣವಾಗಬಹುದು. ಮುಟ್ಟು ನಿಲ್ಲುವ ಮುಂಚಿನ ಅವಧಿ(Perimenopause)ಯ ಕಾರಣಗಳಲ್ಲಿ ಮಾನಸಿಕ ಒತ್ತಡ, ಸಾಕಷ್ಟು ಸೂರ್ಯಸ್ನಾನ(SUN bath)ಕೊರತೆ, ಉತ್ತಮ ಆಹಾರ ಸೇವನೆಯಲ್ಲಿ ವ್ಯತ್ಯಯ ಮತ್ತು ವ್ಯತ್ಯಾಸ, ನಿದ್ರಾಹೀನತೆ, ಅಸಹಜ ವೈಭವೋಪೇತ ಜೀವನಶೈಲಿಯೂ ಅಸ್ಥಿರಂಧ್ರತೆಗೆ ಕಾರಣವಾಗುತ್ತದೆ. ಈ ರೋಗ ಮುಂಚಿತ ತಪಾಸಣೆ ಮಾಡಿಕೊಂಡು ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಮೂಳೆ ಊತ, ಮುರಿತ, ಸೀಳು, ಬೇನೆ, ಸಂಧಿವಾತದಂತಹ ಕಾಯಿಲೆಗಳು ಕಾಣಿಸುತ್ತವೆ.
ಅದಕ್ಕಾಗಿ ಮಹಿಳೆಯರು ವರ್ಷಕ್ಕೊಮ್ಮೆ ಆದರೂ ಮೂಳೆ ಖನಿಜ ಸಾಂದ್ರತೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಡಾ. ದೇವಗೌಡ ಕರೆ ನೀಡಿದರು.

IMG 20240530 WA0005 -
ಸಾಕಷ್ಟು ಕ್ಯಾಲ್ಸಿಯಂ ಆಹಾರ ಸೇವನೆ, ದಿನನಿತ್ಯ ನಡಿಗೆ ಮತ್ತು ವ್ಯಾಯಾಮ, ಒತ್ತಡ ಜೀವನಶೈಲಿ ನಿಯಂತ್ರಣ ಮಾಡಿಕೊಳ್ಳುವುದು ಅತ್ಯಗತ್ಯ. 65ಕ್ಕಿಂತ ಹೆಚ್ಚು ವಯಸ್ಸಾಗಿರುವ, ಮೂಳೆಗಳ ಸಮಸ್ಯೆ ಹೆಚ್ಚಿರುವ ಮಹಿಳೆಯರು ವಿಟಮಿನ್ ಡಿ3 ಹಾಗೂ ಕ್ಯಾಲ್ಸಿಯಂ ಪೂರಕಗಳನ್ನು ವರ್ಷದಲ್ಲಿ ಎರಡು ತಿಂಗಳಾದರೂ ಪಡೆಯಬೇಕು ಎಂದು ಸಲಹೆ ನೀಡಿದರು.
ಜೆಎಲ್ ವಿಂಗ್ ಕಮಾಂಡರ್ ಆರ್. ಎಸ್. ಗುರಯಾ ಡಾ. ದೇವಗೌಡ ಅವರನ್ನು ಸನ್ಮಾನಿಸಿದರು. ಸೈನ್ಯಾಧಿಕಾರಿಗಳು ಮತ್ತು ಅವರ ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

error: Content is protected !!