23/12/2024
Screenshot_2024_0528_153711

ಬೆಳಗಾವಿ-೨೮:ಶ್ರೀ ಗುರು ಶಾಂತೇಶ್ವರ ವಧು ವರ ಮಾಹಿತಿ ಕೇಂದ್ರ ಹುಕ್ಕೇರಿ ಇವರಿಂದ ಬೆಳಗಾವಿಯ ಲಕ್ಷ್ಮಿ ಟೇಕಡಿಯಲ್ಲಿರುವ ಹಿರೇಮಠದಲ್ಲಿ ರವಿವಾರ ಜೂ.2 ರಂದು ಬೆಳಗ್ಗೆ 11ಕ್ಕೆ ವೀರಶೈವ ಲಿಂಗಾಯತ ಹಾಗೂ ಎಲ್ಲ ಒಳಪಂಗಡಗಳ ವಧುವರರ 18ನೇ ಬ್ರಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ದಿವ್ಯಸಾನಿಧ್ಯವನ್ನು ಕಾರಂಜೀಮಠದ ಶ್ರೀ ಗುರುಶಿದ್ಧ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ ವಹಿಸಲಿದ್ದಾರೆ. ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಮಹಾಂತೇಶ ಹಿರೇಮಠ ಆಗಮಿಸಲಿದ್ದಾರೆ. ಉದ್ಘಾಟಕರಾಗಿ ಶ್ರೀಮತಿ ಅಖಿಲ ಭಾರತ ವೀರಶೈವ ಮಹಾಸಭಾದ ಆಧ್ಯಕ್ಷೆ ರತ್ನ ಪ್ರಭಾ ಬೆಲ್ಲದ ನೆರವೆರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವ್ಹಿ.ಜಿ. ನೇರಲಗಿಮಠ, ದಿಲೀಪ ಕುರಂದವಾಡೆ, ಶಿವನಗೌಡ (ಗುಂಡು) ಪಾಟೀಲ ಆಗಮಿಸಲಿದ್ದಾರೆ.
ವೀರಶೈವ ಲಿಂಗಾಯತ ಸಮಾಜದ ವಧುವರರು ವಿದುರ ವಿಧವೆಯರು ವಿಚ್ಚೇದಿತರು ಹಾಗೂ ತಡವಾಗಿ ಮದುವೆಯಾಗ ಬಯಸುವವರು ಈ ಸಮಾವೇಶದಲ್ಲಿ ತಮ್ಮ ಇತ್ತೀಚಿನ ಫೋಟೋ ಮತ್ತು ಬಯೋಡಾಟಾಗಳೊಂದಿಗೆ ಸಮಯಕ್ಕೆ ಸರಿಯಾಗಿ ಹಾಜರ ಇರಲು ಶ್ರೀ ಗುರುಶಾಂತೇಶ್ವರ ವಧುವರ ಮಾಹಿತಿ ಕೇಂದ್ರದ ಅಧ್ಯಕ್ಷ ಶಿವಾನಂದ ಝಿರ್ಲಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ  8660057488.ಇಲ್ಲಿ ಸಂಪರ್ಕಿಸಬಹುದು

error: Content is protected !!