23/12/2024

ಬೆಳಗಾವಿ-02:ಕರ್ನಾಟಕ ಸರ್ಕಾರ 2012 ರಿಂದ ಎಲ್ಲ ಅಂಗಡಿಗಳ ನಾಮಫಲಕಗಳ ಮೇಲೆ ಶೇಕಡಾ 60 ರಷ್ಟು ಕನ್ನಡ ಅಕ್ಷರಗಳು ಇರಬೇಕು ಎಂಬ ಕಾಯದೆಯನ್ನು ತಂದಿದೆ. ಆದರೂ ಎಲ್ಲಿ ನೋಡಿದರೂ ಇಂಗ್ಲೀಷ್, ಹಿಂದಿ, ಮರಾಠಿ ನಾಮಫಲಕಗಳು ಮಾತ್ರ ಕಾಣಿಸುತ್ತವೆ. ಓದುವುದು, ಬರೆಯುವುದು ಎಲ್ಲ ಕನ್ನಡದಲ್ಲಿ. ಆದರೆ ಕನ್ನಡಿಗರನ್ನು ಬಗ್ಗಿಸುವ ಕೆಲಸ ಮಾತ್ರ ನಡೆದಿದೆ ಎಂದು ಕನ್ನಡ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೂಡಿ ಹೇಳಿದರು.

ಪ್ರತಿಭಟನೆಗೆ ಕಾರಣ ತಿಳಿಸಿದ ಅವರು – ಕನ್ನಡಿಗರ ವೋಟು ಮಾತ್ರ ಬೇಕು. ಆದರೆ ಅವರಿಗೆ ಸಾಥ್ ನೀಡದೇ ಇರುವ ಸರಕಾರಕ್ಕೆ ಮುಂಬರುವ ಚುನಾವಣೆಯಲ್ಲಿ ಎಲ್ಲ ಕನ್ನಡಿಗರು ಪಾಠ ಕಲಿಸುತ್ತೇವೆ. ಸರ್ಕಾರ ಮಾಡದಿರುವ ಕೆಲಸವನ್ನು ನಾವು ಮಾಡುತ್ತೇವೆ. ಕನ್ನಡಿಗರನ್ನು ಅವಮಾನಿಸಿ, ಬಂಧಿಸಿರುವ ಸರಕಾರಕ್ಕೆ ನಾಚಿಕೆಯಾಗಬೇಕು. ಅವರನ್ನು ಬಿಡುಗಡೆ ಮಾಡುವವರೆಗೆ ನಿರಂತರ ಹೋರಾಟವನ್ನು ನಡೆಸುತ್ತೇವೆ ಎಂದು ಹೇಳಿದರು.

ಫೆಬ್ರವರಿ 28, 2024ರ ವರೆಗೆ ಎಲ್ಲ ಅಂಗಡಿಗಳ ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ದೊಡ್ಡ ಅಕ್ಷರಗಳು ಕಾಣದಿದ್ದಲ್ಲಿ ಯಾರು ಜವಾಬ್ದಾರರು? ಎಂದು ಪ್ರಶ್ನಿಸಿದರು. ಮಹಾನಗರ ಪಾಲಿಕೆಗೆ ಸಾಕಷ್ಟು ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಣಕ್ಕಾಗಿ ರಾಜಕಾರಣ ನಡೆದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅನೇಕ ಕಾರ್ಯಕರ್ತರು ಉಪಸ್ಥಿತಿರಿದ್ದರು.

error: Content is protected !!