23/12/2024
IMG-20240525-WA0005

ನೇಸರಗಿ-೨೫:ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಗಳ ಭಕ್ತರ ಅನುಗ್ರಹದಲ್ಲಿ ಭಕ್ತರು ನೀಡಿರುವ ಕಾಣಿಕೆಯಿಂದ ಮತ್ತು ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆ ಅವರ ಧರ್ಮಪತ್ನಿ ಶ್ರೀಮತಿ ಹೇಮಲತಾ ಅವರ ಕನಸಿನ ಯೋಜನೆಯಾದ ಮಹಿಳಾ ಜ್ಞಾನ ವಿಕಾಸ ಯೋಜನೆಯಿಂದ ಮಹಿಳೆಯರ ಬೆಳವಣಿಗೆಗೆ ಅನುಕೂಲ ಎಂದು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ಶೈಲಾ ಜಕ್ಕಣ್ಣವರ ಹೇಳಿದರು.

ಅವರು ಶನಿವಾರದಂದು ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಮಹಿಳಾ ಜ್ಞಾನ ವಿಕಾಸ ಕೇಂದ್ರ ಅಡಿಯಲ್ಲಿ ಶ್ರೀ ವೀರಭದ್ರೇಶ್ವರ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಪ್ರವೀಣಕುಮಾರ, ನಿವೃತ್ತ ಶಿಕ್ಷಕರಾದ ಮಲ್ಲಿಕಾರ್ಜುನ ಮದನಬಾವಿ, ಗ್ರಾ ಪಂ ಉಪಾಧ್ಯಕ್ಷ ಶ್ರೀಮತಿ ಖಾಲಿದಾ ಭಾಗವಾನ,ಗ್ರಾ ಪಂ ಸದಸ್ಯ ಶ್ರೀಮತಿ ದೀಪಾ ಅಗಸಿಮನಿ, ಧರ್ಮಸ್ಥಳ ಸಂಘದ ಮಹಿಳಾ ಸದಸ್ಯರು, ಪದಾಧಿಕಾರಿಗಳು, ಗ್ರಾಮಸ್ಥರು, ಗ್ರಾಮದ ಹಿರಿಯರು ಹಾಜರಿದ್ದರು.

error: Content is protected !!