23/12/2024
IMG_20240524_195458

ಬೆಳಗಾವಿ-೨೪:ನೇಕಾರರು ಪ್ರಾಮಾಣಿಕವಾಗಿ ತಮ್ಮ ಮಗ್ಗದಲ್ಲಿ ನೈದ ಸೀರೆಗಳು ಇಡೀ ಭಾರತ ತುಂಬೆಲ್ಲ ಮಾರಾಟವಾಗುತ್ತದೆ ಆದರೆ ಮಧ್ಯವರ್ತಿಗಳಿಂದ ಶಹಾಪುರ ಸೀರೆಗಳಾಗಿ ಪ್ರಸಿದ್ಧಿ ಪಡೆದಿವೆ. ನೇಕಾರರು ಬಡವ ರಾಗಿದ್ದರು ಕೂಡ ಪ್ರಾಮಾಣಿಕರಾಗಿದ್ದಾರೆ ಹಾಗೂ ದಾನಿಗಳಾಗಿದ್ದಾರೆ ಎಂಬ ಅಭಿಪ್ರಾಯವನ್ನು ಆಶೀರ್ವಚನದಲ್ಲಿ ಶ್ರೀಗಳಾದ ಗುರುಸಿದ್ಧಸ್ವಾಮಿಯವರು ಇಂದಿಲ್ಲಿ ಹೇಳಿದರು.

ನಗರದ ಖಾಸಬಾಗ ಉಪ್ಪಾರ ಬೀದಿ ಬನಶಂಕರಿ ದೇವಸ್ಥಾನದ ಶ್ರೀ ಬನಶಂಕರಿ ಮೂರ್ತಿಯ ಪ್ರತಿಷ್ಠಾಪನೆ ಗೊಂಡು ಇದೆ ದಿನಾಂಕ 16 ಕ್ಕೆ ನೂರು ವರ್ಷ ತುಂಬಿದವು. ಶತಮಾನೋತ್ಸವ ನಿಮಿತ್ತ ನಾಲ್ಕು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು ದಿವ್ಯ ಸಾನಿದ್ಯ ವಹಿಸಿದ್ದ ಶ್ರೀಗಳಾದ ಗುರುಸಿದ್ಧ ಮಹಾಸ್ವಾಮಿಗಳು ಮೇಲಿನಂತೆ ಅಭಿಪ್ರಾಯ ಪಟ್ಟರು.
ಪ್ರಥಮ ಶತಮಾನೋತ್ಸವದ ಕಾರ್ಯಕ್ರಮ. ದೇವಸ್ಥಾನದ ಅಧ್ಯಕ್ಷರಾದ ಶ್ರೀ ಮಾರುತಿ ಬಂಗೋಡಿಯವರು ದೇವಾಂಗ ನಂದಿಧ್ವಜ ಪೂಜೆ ಮಾಡಿ ಧ್ವಜಾರೋಹಣ ನಡೆಸಿಕೊಟ್ಟರು. ಶಂಕರ ಬುಚಡಿ ಯವರು ದೇವಸ್ಥಾನ ನಿರ್ಮಾಣ ಮಾಡಿದ ದೇವಸ್ಥಾನ ನೊಂದಣಿ, ಖರೀದಿ, ಇಲ್ಲಿಯವರೆಗೆ ದೇವಸ್ಥಾನ, ನೇಕಾರ ವ್ರತ್ತಿಯ ಅಭಿವೃದ್ಧಿ ಆದ ಎಲ್ಲ ವಿಷಯಗಳನ್ನು ನೂರು ವರ್ಷ ಇತಿಹಾಸಗಳನ್ನು ಸಮಾಜದ ಬಾಂಧವರ ಮುಂದೆ ತಿಳಿಸಿದರು.
ಶ್ರೀಯುತ ಸುರೇಶ ಕಿತ್ತೂರ ಹಾಗೂ ಕಿಶೋರ ಬಡಗಾವಿ ಅವರು ಶತಮಾನೋತ್ಸವ ಆಚರಿಸುತ್ತಿರುವ ದೇವಸ್ಥಾನದ ಬಗ್ಗೆ , ತಮ್ಮ ತಮ್ಮ ದೇವಸ್ಥಾನಗಳ ಸ್ಥಾಪನೆ ಬಗ್ಗೆ , ದೇವಸ್ಥಾನಗಳನ್ನು ಹಿಂದೆ ಸ್ಥಾಪಿಸಿದವರನ್ನು ಸ್ಮರಿಸಿದರು.
ಸಮಾಜದಲ್ಲಿ ಅತಿ ಹಿರಿಯರಾದ ಶ್ರೀ ನಿಂಗಪ್ಪ ಕಾಮಕರ ಅವರು ಉಪಸ್ಥಿತರಿದ್ದರು. ಸುರೇಶ ಕಿತ್ತೂರ, ಕಿಶೋರ ಬಡಗಾವಿ ,ವೆಂಕಟೇಶ್ ವನ ಹಳ್ಳಿ, ಕೆ. ಬಿ. ತಾಳೂಕರ, ಆನಂದಕುಮಾರ್ ಲಟ್ಟಿ, ಬಸವರಾಜ್ ಝಡಪಣ್ಣವರ್, ಬಸವರಾಜ ಅತ್ತಿಮರದ, ಬಸವರಾಜ ಯಂಗಟಿ , ಚಂದ್ರಕಾಂತ ಹಾಶಿಲಕರ, ಬಾಲಕೃಷ್ಣ ಚೌದರಿ ಜಗದ್ಗುರುಗಳಾದ ಪರಮಪೂಜ್ಯ ದಯಾನಂದ ಪುರಿಸ್ವಾಮಿಗಳದಿವ್ಯ ಸಾನಿಧ್ಯದಲ್ಲಿ ಹಾಗೂ ತಮಿಳುನಾಡಿನ ಸೆಲ್ವಂ ಊರಿನ ಶ್ರೀ ಆರ್ ಮಲ್ಲೇಶ್ವರ ಶಾಸ್ತ್ರಿಗಳು, ಜ್ಞಾನೇಶ್ವರ ಕಾಮಕರ ಹಾಗೂ ಶ್ರೀ ಶ್ರೀ ಶ್ರೀ ದಯಾನಂದ ಪುರಿ ಮಹಾಸ್ವಾಮಿಗಳು ಶ್ರೀ ಶ್ರೀಶ್ರೀ ಪಾಲಾಕ್ಷ ಶಿವಯೋಗಿಶ್ವರರು, ಶ್ರೀ ಸದ್ಗುರು ನಾಗೇಂದ್ರ ಸ್ವಾಮಿಗಳು ಬಡೆಕೋಳ್ಳ ಮಠ, ಸದ್ಗುರು ಹ್ರಷಷಿಕೇಶಾನಂದ ಬಾಬಾ ಮಹಾರಾಜರು ದತ್ತವಾಡ, ಶ್ರೀ ಸಿದ್ಧಾರೂಢ ಶರಣರು ಹಿಪ್ಪರಗಿ ಶ್ರೀಗಳವರು ಕಾರ್ಯಕ್ರಮದಲ್ಲಿ ಎಲ್ಲ ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮ ನಡೆಯಿತು.

ಶ್ರೀಯುತ ಲಕ್ಷ್ಮಣ ಪೀರಪ್ಪ ಭಂಡಾರಿ, ಈ ಕುಟುಂಬಸ್ಥರಿಗೆ ಸಮಾಜದ ಪರವಾಗಿ ಶ್ರೀಗಳು ಸನ್ಮಾನಿಸಿ ಗೌರವಿಸಿದರು. ದಿ. 24ರಂದು ಮಹಾಕುಂಭಾಭಿಷೇಕ ಕಳಸಾರೋಹಣ ಹಾಗೂ ಮಹಾಪ್ರಸಾದ ಕಾರ್ಯಕ್ರಮ . ಕಳಸಾ ರೋಹಣ, ಮಹಾ ಕುಂಭಾಭಿಷೇಕ, ಸರ್ವಾಲಂಕಾರ, ಮಂಗಳಾರತಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಜರುಗಿದವು. ಭಕ್ತರಿಗೆ ಅನ್ನಪ್ರಸಾದ ಏರ್ಪಡಿಸಲಾಗಿತ್ತು. ಸಂಜೆಗೆ ದೇವಸ್ಥಾನದಲ್ಲಿ ಮಹಾಮಂಗಳಾರತಿ ದೀಪಾರಾಧನೆ ಕಾರ್ಯಕ್ರಮಗಳು ಅತಿ ವಿಜ್ರಂಭಣೆಯಿಂದ ಜರುಗಿದವು. ಸ್ವಾಗತ, ವಂದನಾರ್ಪಣೆ ವನ್ನು , ಶ್ರೀಯುತ ಶಿವಾನಂದ ಉಪರಿ ಯವರು ನಡೆಸಿಕೊಟ್ಟರು.

error: Content is protected !!