23/12/2024
IMG-20240524-WA0004

ಬೆಳಗಾವಿ-೨೪: ಖಾನಾಪುರ ತಾಲೂಕಿ ಪಾರಿಶ್ವಾಡ ಗ್ರಾಮದಲ್ಲಿರುವ ಶ್ರೀ ಬಿ.ವಿ.ಸಂಬರಗಿ ಪ್ರೌಢ ಶಾಲೆಯ 1995-96ನೇ ಸಾಲಿನ ವಿದ್ಯಾರ್ಥಿಗಳ ನೆನಪಿನ ಸಂಗಮ ಹಾಗೂ ಗುರುವಂದನಾ ಮತ್ತು ಸ್ನೇಹ ಸಂಗಮ ಕಾರ್ಯಕ್ರಮವನ್ನು ಮೇ.26 ಇಲ್ಲಿನ ದಾನಮ್ಮ ದೇವಿ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲಪ್ರಭಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಶೇಖರ ಸಂಬರಗಿ ವಹಿಸಲಿದ್ದಾರೆ. ಉಪನ್ಯಾಸವನ್ನು ಮೈತ್ರಾಯಿಣಿ ಗದಗೆಪ್ಪಗೌಡರ ಹಾಗೂ ಡಾ. ನಿರ್ಮಲಾ ಬಟ್ಟಲ್ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹನಿವಲ್ ಇಂಟರ್ನ್ಯಾಷನಲ್ ಸ್ಕೂಲ್ ನ ಅಧ್ಯಕ್ಷ ಸುಭಾಷ ಗುಳಶೆಟ್ಟಿ, ಬಿ.ವಿ.ಸಂಬರಗಿ ಪ್ರೌಢಶಾಲೆಯ ಪ್ರಾಚಾರ್ಯ ಎಂ.ಜೆ.ಹೆರೂರ್ ಆಗಮಿಸಲಿದ್ದಾರೆ. ಸಾನಿದ್ಯವನ್ನು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ ಎಂದು ಸಂಬರಗಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿ ಮಂಜುನಾಥ ಅಳವಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!