ಬೆಳಗಾವಿ-೨೬: ನಾರ್ವೇಕರ ಗಲ್ಲಿ ಬೆಳಗಾವಿ ಶ್ರೀ ಜ್ಯೋತಿರ್ಲಿಂಗ ದೇವಸ್ತಾನ ದಾದಾ ಅಷ್ಟೇಕರ ಭಕ್ತ ಮಂಡಳಿಯವರು ಶನಿವಾರ ಮೇ 25 ಶನಿವಾರ ಸಂಜೆ 5 ಗಂಟೆಗೆ ಮಹಿಪಾಲಗಡ ವೈದ್ಯನಾಥರಿಂದ ಎತ್ತಿನಗಾಡಿಗಳೊಂದಿಗೆ ಕಾಲ್ನಡಿಗೆಯಲ್ಲಿ ಹೊರಟರು.
ವೈದ್ಯನಾಥ ಪರ್ವತವನ್ನು ತಲುಪಿದ ನಂತರ, ಈ ಭಕ್ತರು ಭಾನುವಾರ ಅಲ್ಲಿಯೇ ಉಳಿದುಕೊಂಡು. ಮೇ 26 ರಂದು ವೈದ್ಯನಾಥ ದೇವರಿಗೆ ಹಾಲಿನ ಅಭಿಷೇಕ ಮಾಡಿ ದೇವರಿಗೆ ದವನ ಅರ್ಪಿಸುತ್ತಾರೆ.
ಶ್ರೀ ಜ್ಯೋತಿರ್ಲಿಂಗ ದೇವಸ್ಥಾನ ದಾದಾ ಅಷ್ಟೇಕರ ಭಕ್ತ ಮಂಡಲ ನಾರ್ವೇಕರ ಗಲ್ಲಿಯ ಭಕ್ತರು ಚೈತ್ರ ಯಾತ್ರೆಯ ನಂತರ ಶ್ರೀ ವೈದ್ಯನಾಥರಿಗೆ ದವನ ಅರ್ಪಿಸುವ ಹಳೆಯ ಸಂಪ್ರದಾಯವನ್ನು ಅನುಸರಿಸುತ್ತಾರೆ.